ಕರ್ನಾಟಕ

karnataka

ETV Bharat / state

ವಿದ್ಯುತ್​ ತಂತಿ ತುಳಿದು ಬಾಲಕ ಜೀವನ್ಮರಣ ಹೋರಾಟ... ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆ - undefined

ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್​ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ಸಾಯಿಚರಣ್ ಬೇರೆ ಬಾಲಕರೊಂದಿಗೆ ಆಟ ಆಡುವಾಗ ಫುಟ್​​ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ ಬಾಲಕ ಜೀವನ್ಮರಣ ಹೋರಾಟ

By

Published : Apr 27, 2019, 6:13 PM IST

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು ಉಂಟಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ, ಬಾಲಕ ಜೀವನ್ಮರಣ ಹೋರಾಟ

ಎರಡು ದಿನದ ಹಿಂದೆಯಷ್ಟೇ ವಿದ್ಯುತ್ ತಂತಿ ತಗುಲಿ ಬಾಲಕ ವಿಕ್ರಮ್ ಎಂಬಾತ ಮೃತಪಟ್ಟಿದ್ದ. ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್​​ನ ನಾಗಲಿಂಗೇಶ್ವರ ದೇವಸ್ಥಾನದ ಬಳಿ 9 ವರ್ಷದ ಬಾಲಕ ಸಾಯಿಚರಣ್ ಬೇರೆ ಬಾಲಕರೊಂದಿಗೆ ಆಟ ಆಡುವಾಗ ಫುಟ್​ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದರಿಂದ ಕೂಡಲೇ ವಿದ್ಯುತ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಾಲಕ ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸಾವು-ಬದುಕಿನ‌ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸಾಯಿಚರಣ್ ತಂದೆ ಬಸವರಾಜ್ ಟ್ಯಾಕ್ಸಿ ಓಡಿಸಿ ಜೀವನ ಮಾಡುತ್ತಿದ್ದಾರೆ. ಬಾಲಕನ ಮೇಲೆ ವಿದ್ಯುತ್ ಪ್ರವಹಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

For All Latest Updates

TAGGED:

ABOUT THE AUTHOR

...view details