ಬೆಂಗಳೂರು:ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (ಬೆಸ್ಕಾಂ) ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವರ್ಷದ ಅವಧಿಗೆ ಒಟ್ಟು 400 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಪ್ರೆಂಟಿಸ್ ಮತ್ತು ಟೆಕ್ನಿಶಿಯನ್ (ಡಿಪ್ಲೊಮಾ) ಅಪ್ರೆಂಟಿಸ್ ವರ್ಗದಲ್ಲಿ ಈ ಹುದ್ದೆ ಭರ್ತಿ ಮಾಡಲಾಗುವುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಬೆಸ್ಕಾಂನಲ್ಲಿ ಅರ್ಜಿ ಆಹ್ವಾನಿಸಲಾಗಿರುವ 400 ಅಪ್ರೆಂಟಿಸ್ ನೇಮಕಾತಿ ವಿವರ ಇಂತಿದೆ.
ಪದವೀಧರ ಅಪ್ರೆಂಟಿಸ್
- ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ - 143 ಹುದ್ದೆಗಳು
- ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ - 116 ಹುದ್ದೆಗಳು
- ಕಂಪ್ಯೂಟರ್ ಸೆನ್ಸ್ ಮತ್ತು ಇಂಜಿನಿಯರಿಂಗ್ - 36 ಹುದ್ದೆಗಳು
- ಇನ್ಫಾರ್ಮೆಷನ್ ಸೈನ್ಸ್ ಮತ್ತು ಇಂಜಿನಿಯರಿಂಗ್ - 20 ಹುದ್ದೆಗಳು
- ಸಿವಿಲ್ ಇಂಜಿನಿಯರಿಂಗ್ - 5 ಹುದ್ದೆಗಳು
- ಇನ್ಸ್ಟುಮೆಂಟೆಷನ್ ಟೆಕ್ನಾಲಜಿ ಇಂಜಿನಿಯರಿಂಗ್- 5
ಟೆಕ್ನಿಶಿಯನ್ (ಡಿಪ್ಲೊಮಾ) ಅಪ್ರೆಂಟಿಸ್
- ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್- 55 ಹುದ್ದೆಗಳು
- ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ - 10 ಹುದ್ದೆಗಳು
- ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ - 10
ವಿದ್ಯಾರ್ಹತೆ:ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಸಂಬಂಧಿತ ಬ್ರಾಂಚ್ನಲ್ಲಿ ಬಿಇ, ಬಿಟೆಕ್ ಪದವಿಯನ್ನು ಹೊಂದಿರಬೇಕು. ಟೆಕ್ನಿಶಿಯನ್ ಅಪ್ರೆಂಟಿಸ್ ಹುದ್ದೆಗೆ 3 ವರ್ಷದ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
2019ರಿಂದ 2023 ಅಕ್ಟೋಬರ್ವರೆಗೆ ವಿದ್ಯಾಭ್ಯಾಸವನ್ನು ಪೂರ್ಣ ಮಾಡಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.