ಕರ್ನಾಟಕ

karnataka

ETV Bharat / state

ನಲಪಾಡ್ ಕಾರು ಅಪಘಾತ ಪ್ರಕರಣ: ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಏನಿದೆ? - ಟ್ಲಿ ಕಾರು ಅಪಘಾತ ಪ್ರಕರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮೊಹಮ್ಮದ್ ಹ್ಯಾರೀಸ್ ಪುತ್ರ ನಲಪಾಡ್ ಬೆಂಟ್ಲಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಅಪಘಾತ ಮಾಡಿದ ಸ್ಥಳದಲ್ಲಿ ಬೆಂಟ್ಲಿ‌ ಕಾರು‌ ವೇಗವಾಗಿ ಚಲಾವಣೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Bentley car
ಬೆಂಟ್ಲಿ ಕಾರು

By

Published : Feb 13, 2020, 4:30 PM IST

ಬೆಂಗಳೂರು: ಮೊಹಮ್ಮದ್ ಹ್ಯಾರೀಸ್ ಪುತ್ರ ನಲಪಾಡ್ ಬೆಂಟ್ಲಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಅಪಘಾತ ಮಾಡಿದ ಸ್ಥಳದಲ್ಲಿ ಬೆಂಟ್ಲಿ‌ ಕಾರು‌ ವೇಗವಾಗಿ ಚಲಾವಣೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಾನು ಕಾರು ಓಡಿಸಿಲ್ಲ..! ಕಾರು ಓಡಿಸಿದ್ದು ಬಾಲು.. ನನ್ನನ್ನ ಸುಮ್ಮನೆ ಬಿಟ್ಟು ಬಿಡಿ. ಎಂದು ಮಾಧ್ಯಮಗಳ ಮುಂದೆ ನಲಪಾಡ್ ಕಣ್ಣೀರಾಕಿದ್ದ​. ಆದರೆ ಪೊಲೀಸರ ತನಿಖೆಯಲ್ಲಿ ಅಪಘಾತವಾಗಿರುವ ಇಂಚಿಂಚು ಮಾಹಿತಿಯು ಬಯಲಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿ

ಏರ್​ಪೋರ್ಟ್​ ರಸ್ತೆಯಲ್ಲಿ ಎರಡು ದುಬಾರಿ ಕಾರುಗಳು ಭಾನುವಾರ ಮಧ್ಯಾಹ್ನ ಏರ್​ಪೋರ್ಟ್​ ಕಡೆಯಿಂದ ಬರ್ತಿದ್ದು ಬೆಂಟ್ಲಿ ಮತ್ತು ಪೋರ್ಸ್ಚೇ ಕಾರುಗಳ ರೈಡಿಂಗ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದು ಕೂಡ ನಾ ಮುಂದು ತಾ ಮುಂದು ಎಂದು ಕಾರುಗಳು ಹೊಗುವುದು. ಕಾರುಗಳು ಪಾಸ್​ ಆಗೋ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಂಗ್ರಹಿಸಿದ ಪೊಲೀಸರು. ಏರ್​ಪೋರ್ಟ್​ ಟೋಲ್​ನಿಂದ ಮೇಖ್ರಿ ಸರ್ಕಲ್​ವರೆಗಿನ ಸುಮಾರು 20ಕ್ಕೂ ಹೆಚ್ಚು ವಿಡಿಯೋವನ್ನು ಸಂಗ್ರಹಿಸಿ ಆ ವಿಡಿಯೋಗಳನ್ನ ಖುದ್ದಾಗಿ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಆದರೆ ಬೆಂಟ್ಲಿ ಕಾರು ಟಿಂಡೆಡ್​ ಆಗಿದ್ದರಿಂದ ಕಾರಿನೊಳಗೆ ಇದ್ದವರು ಯಾರು ಅನ್ನೋದು ನಿಗೂಢವಾಗಿತ್ತು. ಈ ವೇಳೆ ಪೊಲೀಸರು ಟೆಕ್ನಿಕಲ್​ ಮೊರೆ ಹೊಗಿ ಕಾರುಗಳು ಪಾಸ್​ ಆಗಿದ್ದ ಮಾರ್ಗದಲ್ಲಿ ಪೋನ್ ಟವರ್​ ಡಂಪ್​ ಮಾಡಿ ಏರ್​ಪೋರ್ಟ್​ ಟೋಲ್​ನಿಂದ ಕಾರುಗಳು ಸಾಗಿದ ಮಾರ್ಗದಲ್ಲಿ ಪರಿಶೀಲನೆ ಮಾಡಿದಾಗ ಓರ್ವ ಪೇದೆ ಕಾರು ಅಪಘಾತ ಬಳಿಕ ನಲಪಾಡ್​ನನ್ನ ನೋಡಿರುವುದಾಗಿ ಹೇಳಿದ್ದ ಎಲ್ಲಾ ಸಾಕ್ಷಧಾರಗಳ ಮೇಲೆ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿ ಸಂಗ್ರಹ‌ ಮಾಡಿ‌ ನಲಪಾಡ್​ಗೆ ನೋಟಿಸ್​ ನೀಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ABOUT THE AUTHOR

...view details