ಕರ್ನಾಟಕ

karnataka

ETV Bharat / state

ಲಾಠಿ ಬಿಟ್ಟು ರಸ್ತೆಗಿಳಿದ ಖಾಕಿ ಪಡೆ: ಅನಗತ್ಯವಾಗಿ ಓಡಾಡಿದ್ರೆ ವಾಹನ ಸೀಜ್​​

ಲಾಕ್​ಡೌನ್​ನ ಎರಡನೇ ದಿನವಾದ ಇಂದು ಸಿಲಿಕಾನ್ ಸಿಟಿಯಲ್ಲಿ ಪರಿಸ್ಥಿತಿ ಕೊಂಚ ಭಿನ್ನವಾಗಿತ್ತು. ಮೊದಲ ದಿನ ಸಿಕ್ಕಿದವರಿಗೆಲ್ಲ ಲಾಠಿ ಬೀಸುತ್ತಿದ್ದ ಖಾಕಿ ಪಡೆ, ಇಂದು ಶಸ್ತ್ರ ತ್ಯಾಗ ಮಾಡಿ ಬೀದಿಗಿಳಿದಿತ್ತು.

Bengluru Second day Lockdown Updates
ಲಾಠಿ ಬಿಟ್ಟು ರಸ್ತೆಗಿಳಿದ ಪೊಲೀಸರು

By

Published : May 11, 2021, 1:03 PM IST

ಬೆಂಗಳೂರು: ಲಾಕ್​​ಡೌನ್​ನ​ ಎರಡನೇ ದಿನವಾದ ಇಂದು 10 ಗಂಟೆಯಾಗುತ್ತಿದ್ದಂತೆ ನಗರ ಪೊಲೀಸರು ಪೀಲ್ಡಿಗಿಳಿದು ಕರ್ತವ್ಯದಲ್ಲಿ ತೊಡಗಿದ್ದು, ಖುದ್ದು ಡಿಸಿಪಿ ಸಂಜೀವ್ ಪಾಟೀಲ್ ಸಿಟಿ ರೌಂಡ್ಸ್​ ಹೊಡೆದು ಪರಿಸ್ಥಿತಿ ಪರಿಶೀಲನೆ ಮಾಡಿದರು.

ಸುಖಾಸುಮ್ಮನೆ ರಸ್ತೆಗಿಳಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯಕ್ತರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅನಗತ್ಯವಾಗಿ ಓಡಾಡುತಿದ್ದರೆ ವಾಹನ ಸೀಜ್ ಮಾಡುವಂತೆ ಆದೇಶಿಸಿದ್ದಾರೆ.

ಲಾಠಿ ಬಿಟ್ಟು ರಸ್ತೆಗಿಳಿದ ಪೊಲೀಸರು

ಅವಶ್ಯಕತೆ ಇದ್ದರೆ ಮಾತ್ರ ಲಾಠಿ ಬೀಸಿ: ಸುಖಾಸುಮ್ಮನೆ ಜನರಿಗೆ ಹೊಡೆಯಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಬೆತ್ತದ ರುಚಿ ತೋರಿಸಿ ಎಂದು ಪೊಲೀಸ್ ಆಯುಕ್ತರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ, ಲಾಠಿ ಬಿಟ್ಟು ಕೇವಲ ವಾಹನ ಸೀಜ್ ಮಾಡುವ ಸಲುವಾಗಿ ಪೊಲೀಸರು ಒನ್​ ವೇ ಮಾಡಿ ತಪಾಸಣೆಯಲ್ಲಿ ತೊಡಗಿದ್ದಾರೆ.

ಲಾಠಿ ಬಿಟ್ಟ ಖಾಕಿ:ಲಾಕ್​​ಡೌನ್​ನ ಮೊದಲ ದಿನ ರಸ್ತೆಗಿಳಿದವರ ಕಾರಣ ಕೇಳದೆ ಪೊಲೀಸರು ಪ್ರಾಣಿಗಳಿಗೆ ಹೊಡೆದಂತೆ ಹೊಡೆದಿದ್ದರು. ಈ ಬಗ್ಗೆ ಪ್ರತಿಪಕ್ಷ ನಾಯಕರು ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಇಂದಿನಿಂದ ಲಾಠಿ ಬೀಸದೆ, ನಿಯಮ ಮೀರಿದವರ ವಿರುದ್ಧ ಕ್ರಮ ಜರುಗಿಸಲು ತೀರ್ಮಾನಿಸಿದೆ. ಹಾಗಾಗಿ, ನಗರದಸಿಟಿ ಮಾರುಕಟ್ಟೆಯಲ್ಲಿ ಪೊಲೀಸರು ಲಾಠಿ ಚಾರ್ಜ್​ ಮಾಡದೆ ಜನರನ್ನು ಎಚ್ಚರಿಸುತ್ತಿರುವುದು ಕಂಡು ಬಂತು.

ಓದಿ : ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಹೇಳ್ತಿಯಾ ಎಂದ ವ್ಯಕ್ತಿಗೆ ಡಿಸಿಪಿ ತರಾಟೆ

ABOUT THE AUTHOR

...view details