ಕರ್ನಾಟಕ

karnataka

ETV Bharat / state

ನಿರ್ಭಯಾ ಸೇಫ್ ಸಿಟಿ ಪ್ರಕರಣ: ಸಮಿತಿ ಅಧ್ಯಕ್ಷ ಸ್ಥಾನದಿಂದ ನಿಂಬಾಳ್ಕರ್ ವಜಾಗೆ ಡಿ ರೂಪಾ ಒತ್ತಾಯ - D Roopa safe city project

D Roopa
ಡಿ ರೂಪಾ

By

Published : Dec 26, 2020, 4:18 PM IST

Updated : Dec 26, 2020, 4:37 PM IST

16:02 December 26

ಸ್ಪಷ್ಟನೆ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿ ರೂಪಾ ಪತ್ರ

ಬೆಂಗಳೂರು: ನಿರ್ಭಯಾ ಸೇಫ್ ಸಿಟಿ ಟೆಂಡರ್ ಪ್ರಕರಣ ಸಂಬಂಧ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ‌.

ನಾನು ಇ. ಆ್ಯಂಡ್ ವೈ ಕಂಪನಿಗೆ ಕಾನೂನು ಬಾಹಿರವಾಗಿ ಪತ್ರ ಬರೆದಿದ್ದೇನೆ ಎಂಬ ಸುದ್ದಿ ಕೇಳಿ ದಿಗ್ಬ್ರಾಂತಳಾಗಿದ್ದೇನೆ. 4500 ಕೋಟಿ ಐಎಂಎ ವಂಚನೆ ಸಂಬಂಧ ಸಿಬಿಐ ಜಾರ್ಜ್ ಶೀಟ್ ಸಲ್ಲಿಸಲು ಕೋರ್ಟ್ ಅನುಮತಿ ಕೇಳಿದೆ. ಹೈಕೋರ್ಟ್ ಐಎಂಎ ಪ್ರಕರಣವನ್ನು ಗಮನಿಸುತ್ತಲೇ ಇದೆ. ಸರ್ಕಾರ ಕಳೆದ ಸೆಪ್ಟೆಂಬರ್ ಈ ವಿಚಾರವಾಗಿ ಅನುಮೋದನೆ ನೀಡಿದೆ.‌‌ ಇಂತಹ ಹಿನ್ನೆಲೆಯುಳ್ಳ ಅಧಿಕಾರಿ ನಿಮ್ಮ ಗಮನಕ್ಕೆ ಸುಳ್ಳು ದೂರನ್ನು ಕೊಟ್ಟಿದ್ದಾರೆ‌ ಇಂತಹ ಹಿನ್ನೆಲೆ ಇರುವ ನಿಂಬಾಳ್ಕರ್ ಅವರನ್ನು ಸೇಫ್​ ಸಿಟಿ ಟೆಂಡರ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರ ಸ್ವಾಮ್ಯದ ಬಿಇಎಲ್‌ ಸಂಸ್ಥೆಗೆ ಟೆಂಡರ್ ನೀಡದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿತ್ತು. ಹೀಗಾಗಿ, ಟೆಂಡರ್ ಕುರಿತ ಕಡತಗಳ ಓದಿದಾಗ ಸರಿಯಾದ ಕ್ರಮ ಅನುಸರಿಸಿಲ್ಲವೆಂದು ಮೇಲ್ನೊಟಕ್ಕೆ ತಿಳಿದುಬರುತ್ತದೆ. ಹೀಗಾಗಿ, ನಾನು ಹೆಚ್ಚಿನ ಮಾಹಿತಿಗೆ ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಇ ಆ್ಯಂಡ್ ವೈ ಕಂಪನಿ ಬಳಿ ಮಾಹಿತಿ ಕೇಳಿದ್ದೆ. ನಾನು ಸಮಾಜದ ನಾಗರಿಕರ ಹಾಗೂ ಜನರ ಹಣದ ಹಿತದೃಷ್ಟಿಯಿಂದ ಕೇಳಿದ್ದೆ ಹೊರತು ವೈಯಕ್ತಿಕ ಉದ್ದೇಶದಿಂದ‌ ಕೇಳಿಲ್ಲ. ಹೇಮಂತ್ ನಿಂಬಾಳ್ಕರ್ ಅವರು ನನ್ನ ವೈಯಕ್ತಿಕ ಹಿತಾಸಕ್ತಿ ಇದೆ ಎಂದು ಹೇಳಿ ದೂರು ನೀಡಿರುವುದು ಸುಳ್ಳು ಎಂದಿದ್ದಾರೆ.

ಸೇಫ್ ಸಿಟಿ ಯೋಜನೆಗೆ 1,067 ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಯ ಟೆಂಡರ್ ಕರೆಯುವ ಮತ್ತು ಪರಿಶೀಲನೆ ಮಾಡುವ ಸಮಿತಿ ಅಧ್ಯಕ್ಷರಾಗಿರುವ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರು, ನ್ಯಾಯಯುತವಾಗಿ ಟೆಂಡರ್ ಅನುಮೋದಿಸಿದೆ ಪಕ್ಷಪಾತ ಎಸಗಿದ್ದಾರೆ.‌ ಯಾವುದೋ ಒಂದು ಕಂಪನಿಯ ಪರವಾಗಿ ಕೆಲಸ ಮಾಡಿದ್ದಾರೆ‌. ಸೇಫ್ ಸಿಟಿ ಟೆಂಡರ್​ನಲ್ಲಿ ಪಕ್ಷಪಾತ ಎಸಗಿದ್ದಾರೆಂದು ಪ್ರಧಾನಮಂತ್ರಿ ಕಚೇರಿಗೆ ಬಿಇಎಲ್ ಸಂಸ್ಥೆ ಪತ್ರ ಬರೆದಿತ್ತು. ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರು ಸೇಫ್ ಸಿಟಿ ಫೈಲ್ ನನಗೆ ಅಧ್ಯಯನ ಮಾಡಲು ನೀಡಿದ್ದರು ಎಂದು‌ ಪತ್ರದಲ್ಲಿ ತಿಳಿಸಿದ್ದಾರೆ.

ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ:

ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ತನಿಖಾಧಿಕಾರಿಯಾಗಿ ಕಮಲ್ ಪಂತ್ ಅವರನ್ನು ನೇಮಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೆಂಟರ್ ಪ್ರಕ್ರಿಯೆ 2021ರ ಜನವರಿ 8ರ ತನಕ ಇದೆ. ಇನ್ನೂ ಹೊಸದಾಗಿ ಗುತ್ತಿಗೆ ಬಿಡ್​ಗಳು ಬಂದಿಲ್ಲ. ಈಗಾಗಲೇ ಚಾಲ್ತಿಯಲ್ಲಿ ಇರುವ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗಲ್ಲ. ಪಾರದರ್ಶಕವಾಗಿ ಎಲ್ಲವನ್ನು ನಡೆಸಿಕೊಂಡು ಹೋಗಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Last Updated : Dec 26, 2020, 4:37 PM IST

ABOUT THE AUTHOR

...view details