ಕರ್ನಾಟಕ

karnataka

ETV Bharat / state

ಟಿಡಿಆರ್ ಅಕ್ರಮ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ ಎಸಿಬಿ - ಬೆಂಗಳೂರಿನಲ್ಲಿ ಟಿಡಿಆರ್ ಅಕ್ರಮ ಪ್ರಕರಣ

ಬೃಹತ್ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಜನರ ಮೇಲೆ ಎಸಿಬಿ, ನ್ಯಾಯಾಲಯಕ್ಕೆ ‌6,500 ಪುಟಗಳ ಚಾರ್ಜ್​​​​ಶೀಟ್ ಸಲ್ಲಿಕೆ ಮಾಡಿದೆ.

TDR illegal case in Bengaluru
ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ ಎಸಿಬಿ

By

Published : Mar 17, 2020, 3:21 PM IST

ಬೆಂಗಳೂರು:ಬೃಹತ್ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಜನರ ಮೇಲೆ ಎಸಿಬಿ, ನ್ಯಾಯಾಲಯಕ್ಕೆ ‌6,500 ಪುಟಗಳ ಚಾರ್ಜ್​​​​ಶೀಟ್ ಸಲ್ಲಿಕೆ ಮಾಡಿದೆ. ಹಾಗೆ ಕೆಲ ಸರ್ಕಾರಿ ಅಧಿಕಾರಿಗಳ ತನಿಖೆಗೆ ಅಭಿಯೋಜನೆ ಸಿಗಬೇಕಿದ್ದು, ಅನುಮತಿ ಸಿಕ್ಕ ನಂತರ ಮತ್ತಷ್ಟು ಅಧಿಕಾರಿಗಳ ಮೇಲೆ ಚಾರ್ಜ್​​​ಶೀಟ್ ಸಲ್ಲಿಸುವ ಸಾಧ್ಯತೆ ಇದೆ ಎಂದು ಎಸಿಬಿ‌ ಮೂಲಗಳು ತಿಳಿಸಿವೆ.

ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ ಎಸಿಬಿ

ದೋಷಾರೋಪ ಪಟ್ಟಿಯಲ್ಲಿ ಏನಿದೆ..? :ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್. ಪುರಂ ಹೋಬಳಿಯ ಕೌದೇನಹಳ್ಳಿ ಗ್ರಾಮದಲ್ಲಿ‌ ನಂ.132 ರಲ್ಲಿ, 1989ರಲ್ಲಿ ರೆವಿನ್ಯೂ ಬಡಾವಣೆ ನಿರ್ಮಿಸಿ ಸೈಟ್​​​ಗಳನ್ನು ವಿಂಗಡಿಸಿ ಸಾರ್ವಜನಿಕರಿಗೆ ನೋಂದಾಯಿತ ಪತ್ರದ ಮೂಲಕ ಮಾರಾಟ ಮಾಡಲಾಗಿತ್ತು. ಹಾಗೆಯೇ ಸಾರ್ವಜನಿಕರು ಅಲ್ಲಿ ‌ಮನೆ ಕಟ್ಟಿ‌ ಕಂದಾಯವನ್ನು ಕೂಡ ಪಾವತಿ ಮಾಡ್ತಿದ್ರು.

ಆದರೆ, ಬಿಬಿಎಂಪಿಯ ಆರೋಪಿತ ಟಿಡಿಆರ್ ಬ್ರೋಕರ್​​ಗಳಾದ ಸುರೇಂದ್ರನಾಥ್, ಗೌತಮ್, ಬಿಬಿಎಂಪಿಯ‌ ಮಹದೇವಪುರ ವಲಯದ ಅಧಿಕಾರಿ ಕೃಷ್ಣಾಲಾಲ್, ಬಿಬಿಎಂಪಿ ಕಾರ್ಯಪಾಲಕ ಕೆ.ಎನ್ ರಮೇಶ್, ಸೇರಿದಂತೆ ಹಲವಾರು ಮಂದಿ ಸೇರಿಕೊಂಡು ಬಿಬಿಎಂಪಿಯಲ್ಲಿ ಖಾತೆ ಹೊಂದಿರುವ ಸ್ವತ್ತುಗಳನ್ನು ತಮ್ಮ ಕಡೆಗೆ ಮಾಡಿ ಸರ್ಕಾರಕ್ಕೆ ಮೋಸ‌ ಮಾಡಿರುವ ವಿಚಾರದ ಕುರಿತ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ‌ ಮಾಡಿದ್ದಾರೆ.

ABOUT THE AUTHOR

...view details