ಬೆಂಗಳೂರು :ಪೊಲೀಸರು ಎಂದರೆ ತಪ್ಪು ಮಾಡಿದ ಆರೋಪಿಗಳನ್ನ ಸೆರೆ ಹಿಡಿದು, ಅವರಿಗೆ ತಕ್ಕ ಶಿಕ್ಷೆ ಕೊಟ್ಟು ಸಾರ್ವಜನಿಕರ ಸಹಾಯಕ್ಕೆ ಸದಾ ನಿಲ್ಲುತ್ತಾರೆಂದು ಭಾವಿಸಲಾಗುತ್ತದೆ. ಖಾಕಿ ಪಡೆ ಅಂದರೆ ಕೆಲವರಿಗೆ ಧೈರ್ಯ ಇದ್ರೆ, ಇನ್ನೂ ಕೆಲವರಿಗೆ ಭಯ ಇರುತ್ತದೆ. ಆದ್ರೆ ಕೆಲವರಿಗೆ ಪೊಲೀಸರು ಅಂದ್ರೆ ಎಲ್ಲಿಲ್ಲದ ಕೋಪ. ರಸ್ತೆ ಬದಿಗಳಲ್ಲಿ ಚೆಕ್ಕಿಂಗ್‌ಗೆ ಅಂತ ನಿಂತು ಹಣ ವಸೂಲಿ ಮಾಡುತ್ತಾರೆಂಬ ಭಾವನೆ .ಆದರೆ ಬಹುತೇಕರಿಗೆ ಪೊಲೀಸರು ಅಂದರೆ ಇನ್ನಿಲ್ಲದ ಗೌರವ ಇದೆ.
ರಾಜ್ಯದ ಪೊಲೀಸರು ಕೂಡ ಇತ್ತೀಚಿನ ದಿನಗಳಲ್ಲಿ ತಮ್ಮನ್ನು ತಾವು ಅನೇಕ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿ ಜನರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಮಲ್ಲೇಶ್ವರಂ ಸಂಚಾರ ವಿಭಾಗದ ಮಹಿಳಾ ಎಎಸ್ಐ ಶಾಂತ ಶೆಟ್ಟಿಯಿಂದ ವಿಭಿನ್ನ ರೀತಿಯ ಜನ ಜಾಗೃತಿ ಕಾರ್ಯಕ್ರಮ ನಡೆಸಿದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಸ್ಥಳವನ್ನ ಅಭಿವೃದ್ಧಿ ಮಾಡಿದ್ದಾರೆ.