ಬೆಂಗಳೂರು : ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯ ಕುತ್ತಿಗೆ ಸೀಳಿ ಪತಿಯೇ ಕೊಲೆ ಮಾಡಿರುವ ಘಟನೆ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ ಪಾಳ್ಯದಲ್ಲಿ ನಡೆದಿದೆ. ನ್ಯಾನ್ಸಿ ಪ್ಲೋರಾ(29) ಮೃತ ಗೃಹಿಣಿ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಜಾನ್ ಸುಪ್ರಿತ್ನನ್ನು ಬಂಧಿಸಲಾಗಿದೆ.
ಅನುಮಾನದ ಭೂತಕ್ಕೆ ಗೃಹಿಣಿ ಬಲಿ.. ಪತ್ನಿಯ ಕತ್ತು ಸೀಳಿ ಕೊಲೆಮಾಡಿದ ಪತಿ - ಬೆಂಗಳೂರಿನಲ್ಲಿ ಮಹಿಳೆ ಕೊಲೆ
ರಾಜಧಾನಿ ಬೆಂಗಳೂರಿನಲ್ಲಿ ಅನುಮಾನದ ಭೂತಕ್ಕೆ ಗೃಹಿಣಿ ಬಲಿಯಾಗಿದ್ದಾಳೆ. ಪತ್ನಿಯ ಕತ್ತು ಸೀಳಿ ಕೊಲೆಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನುಮಾನ ಭೂತಕ್ಕೆ ಗೃಹಿಣಿ ಬಲಿ
ಶಾಮಿಯಾನ ಹಾಕುವ ಉದ್ಯಮ ಮಾಡುತ್ತಿದ್ದ ಜಾನ್ ಸುಪ್ರಿತ್ ಕಳೆದ ಎಂಟು ವರ್ಷಗಳ ಹಿಂದೆ ನ್ಯಾನ್ಸಿ ಪ್ಲೋರಾಳನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಅನುಮಾನದಲ್ಲಿ ಮನೆಯಲ್ಲಿ ಆಗಾಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ಸಂಜೆ ಸುಮಾರು 6 ಗಂಟೆಗೆ ಪತ್ನಿಯ ಕತ್ತು ಸೀಳಿ ಕೊಲೆಮಾಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಕೆ.ಆರ್.ಪುರಂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಓದಿ:ಮದುವೆ ಮಾಡಿಸುವ ಸೋಗಿನಲ್ಲಿ ಮಹಿಳೆ ಕೊಲೆ ಮಾಡಿದ ಸ್ನೇಹಿತೆ.. ಅದೊಂದು ಸುಳಿವಿನಿಂದ ಪೊಲೀಸರ ಬಲೆಗೆ ಬಿದ್ದ ಹಂತಕರು