ಕರ್ನಾಟಕ

karnataka

ETV Bharat / state

ವಿಚ್ಛೇದಿತ ಪತಿ ಹತ್ಯೆ ಮಾಡಲು ಮಾಜಿ ಪತ್ನಿ ಸುಪಾರಿ ಆರೋಪ: ದೂರು ದಾಖಲು - ಬೆಂಗಳೂರು

ವಿಚ್ಛೇದಿತ ಪತಿ ಹತ್ಯೆ ಮಾಡಲು ಮಾಜಿ ಪತ್ನಿ 10 ಲಕ್ಷಕ್ಕೆ ಸುಪಾರಿ ನೀಡಿದ್ದಾಳೆ ಎಂದು ಆರೋಪಿಸಿ ಪತಿ ಪ್ರವೀಣ್ ಬೆಂಗಳೂರಿನ ಆರ್.ಟಿ.ನಗರ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ

Bengaluru
ಪ್ರವೀಣ್- ದೂರುದಾರ

By

Published : Feb 1, 2023, 8:49 AM IST

Updated : Feb 1, 2023, 2:45 PM IST

ಬೆಂಗಳೂರು: ವಿಚ್ಛೇದಿತ ಪತಿಯ ಹತ್ಯೆಗೆ ಮಾಜಿ ಪತ್ನಿಯೇ ಸುಪಾರಿ‌ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರ್.ಟಿ ನಗರದಲ್ಲಿ ಈ ಪ್ರಕರಣ ನಡೆದಿದೆ. ಪ್ರವೀಣ್ ಎಂಬಾತನನ್ನ ಮುಗಿಸಲು ಮನ್ಸೂರ್ ಆಲಿಯಾಸ್ ದೂನ್ ಮನ್ಸೂರ್ ಎಂಬಾತನಿಗೆ ಸಂಧ್ಯಾ ಸೂರ ಎಂಬಾಕೆ 10 ಲಕ್ಷ ರೂ ಹಣ ನೀಡಿದ್ದಾರೆ ಎಂದು ಮಾಜಿ‌ ಪತಿ ಪ್ರವೀಣ್ ದೂರು ನೀಡಿದ್ದಾನೆ.

ಡ್ರ್ಯಾಗರ್​​ನಿಂದ ಹಲ್ಲೆ: ಕೌಟುಂಬಿಕ ಕಲಹ ಕಾರಣ ಸಂಧ್ಯಾ ಹಾಗು ಪ್ರವೀಣ್ ವಿಚ್ಚೇದನ ಪಡೆದುಕೊಂಡಿದ್ದರು. ಆದರೆ ಪತ್ನಿ ಸಂಧ್ಯಾ ಮಾಜಿ ಪತಿ‌ ಮೇಲೆ ಇನ್ನಿತರ ಆರೋಪ ಹೊರೆಸಿ ಪ್ರಕರಣ ದಾಖಲಿಸಿದ್ದರು. ಇನ್ನು ಸುಪಾರಿ ಪಡೆದಿದ್ದ ಮನ್ಸೂರ್, ಪ್ರವೀಣ್ ಬಳಿ ಬಂದು ನಿಮ್ಮ ಮಾಜಿ ಪತ್ನಿ ಕೇಸ್ ವಾಪಸ್ ತೆಗೆದುಕೊಳ್ಳಲು ಒಪ್ಪಿದ್ದಾರೆ. ಅವರ ಜತೆ ಮಾತುಕತೆ ನಡೆಸಬೇಕು ಎಂದು ಆರ್.ಟಿ ನಗರದ ಚಾಮುಂಡಿ ನಗರದ ಮನೆಯೊಂದಕ್ಕೆ ಕರೆದೊಯ್ದಿದ್ದ. ನಂತರ ರೂಂನಲ್ಲಿ ಲಾಕ್ ಮಾಡಿ ಡ್ರ್ಯಾಗರ್​​ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರವೀಣ್​ ಆರೋಪಿಸಿದ್ದಾರೆ.

15 ಲಕ್ಷ ರೂ.ಗೆ ಬೇಡಿಕೆ: ನಂತರ ಸಂಧ್ಯಾಳಿಗೆ ಕರೆ ಮಾಡಿ ನೀವು ಹೇಳಿದಂತೆ ನಾನು ಪ್ರವೀಣ್ ನನ್ನು ಅಪಹರಿಸಿದ್ದು, ಕೊಲ್ಲುತ್ತೇನೆ ಎಂದು ಹೇಳಿದ್ದ. ನಂತರ ಪ್ರವೀಣ್ ನನ್ನನ್ನು ಆತನ ಕಾರಿನಲ್ಲಿ ರಾಮನಗರಕ್ಕೆ ಕರೆದುಕೊಂಡು ಹೋಗಿ ಕೊಲ್ಲುವ ಯೋಜನೆ ಹಾಕಿದ್ದರು. ಈ ವೇಳೆ, ತನ್ನನ್ನ ಬಿಟ್ಟುಬಿಡಿ ಎಂದು ಕೇಳಿಕೊಂಡಾಗ, 15 ಲಕ್ಷ ರೂ. ಕೊಟ್ಟರೆ ಬಿಡುತ್ತೇನೆಂದು ಎಂದು ಬೇಡಿಕೆ ಇಟ್ಟಿದ್ದ. ಹೀಗಾಗಿ ಪ್ರವೀಣ್ ತನ್ನ 2ನೇ ಪತ್ನಿಗೆ ಕರೆ ಮಾಡಿ ವಿಚಾರ ಮುಟ್ಟಿಸಿ, ಹಂತ ಹಂತವಾಗಿ 2.75 ಲಕ್ಷ ಪೇ ಮಾಡಿಸಿಕೊಂಡಿದ್ದ. ಅದನ್ನ ಪಡೆದ ಅಪಹರಣಕಾರರು ಪ್ರವೀಣ್ ಮೈಮೇಲಿದ್ದ ಚಿನ್ನದ ಆಭರಣ, ಕಾರು, ಮೊಬೈಲ್ ಹಾಗೂ ಪರ್ಸ್​ ಕಸಿದುಕೊಂಡು ಮತ್ತೆ ಬೆಂಗಳೂರಿನಲ್ಲಿ ಪ್ರವೀಣ್ ನನ್ನ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮನ್ಸೂರ್ , ಸಂಧ್ಯಾ ಸೂರ ಹಾಗೂ ಸತ್ಯನಾರಾಯಣ ಸೇರಿ 8 ಜನರ ವಿರುದ್ಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ದಾರಿ ತಪ್ಪಿದ ಮಗನ ಅಂತ್ಯಕ್ಕೆ ಸುಪಾರಿ ನೀಡಿದ ಹೆತ್ತವರು.. ತೆಲಂಗಾಣದಲ್ಲಿ ಅಚ್ಚರಿಯ ಘಟನೆ

ಗ್ರಾ.ಪಂ ಸದಸ್ಯನ ಹತ್ಯೆಗೆ ಸುಪಾರಿ:ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿರುವ ಆರೋಪ ಪ್ರಕರಣ ನಗರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪರಶುರಾಮ ನಾಯ್ಕ ವಿರುದ್ಧ ದೂರು ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಠಾಣೆಯಿಂದ ಪೊಲೀಸ್​​ ಕಾನ್​ಸ್ಟೇಬಲ್​ ಪರಾರಿಯಾಗಿದ್ದರು.

ಆನೇಕಲ್ ತಾಂಡಾದ ಗ್ರಾಮ ಪಂಚಾಯಿತಿ ಸದಸ್ಯ ಎಲ್.ಆರ್. ಪಾಂಡುನಾಯ್ಕ ಅವರನ್ನು ಕೊಲೆ ಮಾಡಲು ರವಿನಾಯ್ಕ ಎನ್ನುವವರಿಗೆ 10 ಲಕ್ಷ ನಗದು, ಒಂದು ಮನೆ ಕಟ್ಟಿಸಿಕೊಡುವುದಾಗಿ ಆಮಿಷವೊಡ್ಡಿದ್ದರು ಎನ್ನಲಾಗ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಹೋದರ ದೇವೇಂದ್ರ ನಾಯ್ಕ್ ಹಾಗೂ ಸೊಸೈಟಿ ಚುನಾವಣೆಯಲ್ಲಿ ತಾಯಿ ಯಮುನಿಬಾಯಿ ಸೋತಿದ್ದರು. ಇದರಿಂದಾಗಿ ಪರಶುರಾಮ ಪ್ರತಿಸ್ಪರ್ಧಿಯ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ:ಗ್ರಾಮ ಪಂಚಾಯತ್​ ಸದಸ್ಯನ ಹತ್ಯೆಗೆ ಸುಪಾರಿ.. ಆರೋಪಿ ಪೊಲೀಸ್​ ಕಾನ್​ಸ್ಟೇಬಲ್​ ಪರಾರಿ

Last Updated : Feb 1, 2023, 2:45 PM IST

ABOUT THE AUTHOR

...view details