ಕರ್ನಾಟಕ

karnataka

ETV Bharat / state

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಇಂದು ಮತದಾನ - undefined

ರಾಜ್ಯದ 22 ಜಿಲ್ಲೆಯ 61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್‌ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಹಾಗೂ 201 ಗ್ರಾಮ ಪಂಚಾಯಿತಿಗಳ ಸ್ಥಾನಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದೆ.

ಮತದಾನ

By

Published : May 29, 2019, 5:24 AM IST

ಬೆಂಗಳೂರು:ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಗಳ ಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯದ 22 ಜಿಲ್ಲೆಯ 61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್‌ ಹಾಗೂ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಪಾಲಿಕೆ, ಪುರಸಭೆ, ನಗರಸಭೆ ಹಾಗೂ 201 ಗ್ರಾಮ ಪಂಚಾಯಿತಿಗಳ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ.

61 ನಗರ ಸ್ಥಳೀಯ ಸಂಸ್ಥೆಗಳಲ್ಲಿ 4,360 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 61 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 1326 ವಾರ್ಡ್​ಗಳಿದ್ದು, ಈ ಪೈಕಿ 30 ವಾರ್ಡ್​ಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಚುನಾವಣೆ ನಡೆಯುವುದಿಲ್ಲ. ಉಳಿದಂತೆ 1296 ವಾರ್ಡ್​ಗಳಲ್ಲಿ ಮತದಾನ ನಡೆಯಲಿದೆ.

61 ನಗರ ಸ್ಥಳೀಯ ಸಂಸ್ಥೆಗಳ 1326 ವಾರ್ಡ್​ಗಳಲ್ಲಿ ಚುನಾವಣೆಗಾಗಿ ಸುಮಾರು 8230 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 1998 ಬ್ಯಾಲೆಟ್ ಯೂನಿಟ್ ಮತ್ತು 1998 ಕಂಟ್ರೋಲ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ಪಕ್ಷವಾರು ಅಭ್ಯರ್ಥಿಗಳ ವಿವರ:

ಕಾಂಗ್ರೆಸ್- 1224,

ಬಿಜೆಪಿ- 1125,

ಜೆಡಿಎಸ್- 780

, ಸಿಪಿಐ(ಎಂ)- 25

, ಬಿಎಸ್ ಪಿ- 103,

ಪಕ್ಷೇತರರು- 1056

. ಗ್ರಾಮ ಪಂಚಾಯತಿ ಉಪಚುನಾವಣೆ:

30 ಜಿಲ್ಲೆಗಳಲ್ಲಿನ ಒಟ್ಟು 191 ಗ್ರಾಮ ಪಂಚಾಯತಿಗಳಲ್ಲಿನ 198 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಕಣದಲ್ಲಿ ಒಟ್ಟು 297 ಅಭ್ಯರ್ಥಿಗಳಿದ್ದಾರೆ. ಒಟ್ಟು 201 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಈ ಪೈಕಿ 118 ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರು ಆಯ್ಕೆಯಾಗಿದ್ದಾರೆ. ಒಟ್ಟು 7 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಒಟ್ಟು 76 ಸ್ಥಾನಗಳಿಗೆ ಮತದಾನ ನಡೆಯಲಿದೆ.

ತಾಲೂಕು ಪಂಚಾಯತಿ ಉಪ ಚುನಾವಣೆ:

ಇನ್ನು ವಿವಿಧ ಜಿಲ್ಲೆಗಳ 8 ತಾಲೂಕು ಪಂಚಾಯತಿಗಳಲ್ಲಿ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಓರ್ವ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, 9 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ತಾಲೂಕು ಪಂಚಾಯತಿ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​​ನ ತಲಾ 9 ಅಭ್ಯರ್ಥಿಗಳು, ಜೆಡಿಎಸ್​​ನ 4, ಬಿಎಸ್​​​ಪಿಯ 2 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಕಣದಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details