ಬೆಂಗಳೂರು: ಗಮನ ಬೇರೆಡೆ ಸೆಳೆದು ವ್ಯಕ್ತಿಯೊಬ್ಬನಿಂದ ಹಣ ದೋಚಲು ಯತ್ನಿಸಿದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಸಖತ್ ಆಗೇ ಗೂಸಾ ನೀಡಿದ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ.
ಹಣ ದೋಚಲು ಯತ್ನ: ಸಿಕ್ಕಿಬಿದ್ದ ಖದೀಮರಿಗೆ ಬಿತ್ತು ಹಿಗ್ಗಾ ಮುಗ್ಗಾ ಗೂಸಾ..!! - Trying to rob money
ವ್ಯಕ್ತಿಯೊಬ್ಬ ಬ್ಯಾಂಕಿನಿಂದ ಹಣ ಪಡೆದು ಹೊರ ಬರುತ್ತಿರುವಾಗ, ಹೊಂಚು ಹಾಕಿ ಕುಳಿತು ಹಣ ದೋಚಲು ಯತ್ನಿಸಿದ ಇಬ್ಬರು ಕಳ್ಳರಿಗೆ ಸಾರ್ವಜನಿಕರು ಸಖತ್ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಬಾಗಲಕುಂಟೆ ಬಳಿ ನಡೆದಿದೆ.
ಪಟ್ವಾರಿ ಎಂಬವರು ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಹೀಗಾಗಿ 50 ಸಾವಿರ ಹಣ ಎಟಿಎಂ ನಲ್ಲಿ ತೆಗೆಯಲು ಅವಕಾಶ ಇಲ್ಲದ ಹಿನ್ನೆಲೆ, ಬಾಗಲಗುಂಟೆ ಎಸ್ಬಿಐ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಹೊರ ಬರುತ್ತಿದ್ದರು.ಈ ವೇಳೆ ನಾಲ್ಕು ಜನ ಬೈಕ್ನಲ್ಲಿ ಬಂದು ಹೊಂಚು ಹಾಕಿ ಕುಳಿತಿದ್ದರು. ಅದರಲ್ಲಿ ಇಬ್ಬರು ಹಣ ದೋಚಿ ಪರಾರಿಯಾಗಲು ಯತ್ನಿಸಿದ್ದಾರೆ.
ಕಳ್ಳರು ಹಣ ದೋಚಲು ಯತ್ನಿಸುತ್ತಿದ್ದಂತೆ, ಪಟ್ಟಾರಿ ಜೋರಾಗಿ ಕಿರುಚಾಡಿದ್ದು, ತಕ್ಷಣ ಸಾರ್ವಜನಿಕರು ಕಳ್ಳರ ಬೆನ್ನತ್ತಿ ಹಿಡಿದು ಇಬ್ಬರಿಗೆ ಗೂಸಾ ಕೊಟ್ಟಿದ್ದಾರೆ. ಬಳಿಕ ಬಾಗಲಗುಂಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರು ಕಳ್ಳರು ಸ್ಥಳದಿಂದ ಪರಾರಿಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ತನಿಖೆ ಮುಂದುವರೆದಿದೆ.