ಬೆಂಗಳೂರು:ಬೆಂಗಳೂರು ಸಂಚಾರ ಪೊಲೀಸರು, ಟ್ರಾಫಿಕ್ ದಟ್ಟಣೆಯ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಕ್ಕಾಗಿ ಕಳೆದ ಒಂದು ತಿಂಗಳಲ್ಲಿ 26,351 ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಸಂಚಾರ ದಟ್ಟಣೆ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಗೆ ನೆರವಾದ ಸಂಚಾರ ಪೊಲೀಸರು! - ಬೆಂಗಳೂರು ಸಂಚಾರ ಪೊಲೀಸರು
ಬೆಂಗಳೂರು ಸಂಚಾರ ಪೊಲೀಸರು, ಟ್ರಾಫಿಕ್ ಕಿರಿ ಕಿರಿ ನಡುವೆಯೂ ಸಾವಿರಾರು ರೋಗಿಗಳ ತ್ವರಿತ ಚಿಕಿತ್ಸೆಕ್ಕಾಗಿ ಕಳೆದ ಒಂದು ತಿಂಗಳಲ್ಲಿ 26,351 ಆ್ಯಂಬುಲೆನ್ಸ್ಗಳ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಕಾಯಿಲೆ, ರಸ್ತೆ ಅಪಘಾತ ಸೇರಿದಂತೆ ಹಲವು ರೀತಿಯ ತುರ್ತು ಚಿಕಿತ್ಸೆಯ ಅಗತ್ಯಕ್ಕಾಗಿ, ನೋವಿನಿಂದ ಬಳಲುತ್ತಿದ್ದ ರೋಗಿಗಳನ್ನ ಆ್ಯಂಬುಲೆನ್ಸ್ ಮೂಲಕ ನಗರದ ವಿವಿಧ ಆಸ್ಪತ್ರೆಗೆಳಿಗೆ ಸಾಗಿಸಲಾಗುತ್ತದೆ. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆ ವಾಹನ ಸಂಚಾರ ದಟ್ಟಣೆಯಿಂದ ಸಕಾಲಕ್ಕೆ ಆಸ್ಪತ್ರೆಗೆ ಬರಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಎಷ್ಟೋ ರೋಗಿಗಳು ಸಾವನ್ನಪ್ಪಿದ್ದಾರೆ.
ಹೀಗಾಗಿ ರೋಗಿಗಳು ತುರ್ತು ಚಿಕಿತ್ಸೆ ಪಡೆಯಲು ಆ್ಯಂಬುಲೆನ್ಸ್ ವಾಹನಕ್ಕಾಗಿ ಸುಗಮ ಸಂಚಾರಕ್ಕಾಗಿ ಸಿಟಿ ಟ್ರಾಫಿಕ್ ಪೊಲೀಸರು ಸಿಗ್ನಲ್ಗಳಲ್ಲಿ ಕೆಂಪು ದ್ವೀಪವಿದ್ದರೂ ಹಸಿರು ದ್ವೀಪ ಹಾಕಿ, ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟಿದ್ದಾರೆ. ಜನವರಿ ತಿಂಗಳಲ್ಲಿ ಬರೋಬ್ಬರಿ 26,351 ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.