ಕರ್ನಾಟಕ

karnataka

ETV Bharat / state

ನಾನು ಯಾರಿಗೂ ಅವಮಾನ ಮಾಡಿಲ್ಲ.. ವಜಾ ಆಗಿರುವ ಬೆಂಗಳೂರು ಶಾಲಾ ಶಿಕ್ಷಕಿ ಪ್ರತಿಕ್ರಿಯೆ - ಬೆಂಗಳೂರು ಶಿಕ್ಷಕಿ ಬರಹ ವಿವಾದ

ವಜಾ ಆಗಿರುವ ಶಿಕ್ಷಕಿ ಶಶಿಕಲಾ ಸ್ಪಷ್ಟನೆ ನೀಡಿದ್ದು, ವಿವಾದ ಹೇಗೆ ಬಂತು ಎಂದು ನನಗೆ ಶಾಕ್ ಆಗಿದೆ. ತರಗತಿಯಲ್ಲಿ ನಾನು ಯಾವುದೇ ಕೆಟ್ಟ ಮಾತು ಹೇಳಿಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಲಾಟೆ ಮಾಡಬೇಡಿ ಎಂದಿದ್ದೆ ಅಷ್ಟೇ ಎಂದಿದ್ದಾರೆ..

bengaluru-school-teacher-clarification-on-dismiss-issue
ನಾನು ಯಾರಿಗೂ ಅವಮಾನ ಮಾಡಿಲ್ಲ.. ವಜಾ ಆಗಿರುವ ಬೆಂಗಳೂರು ಶಾಲಾ ಶಿಕ್ಷಕಿ ಪ್ರತಿಕ್ರಿಯೆ

By

Published : Feb 13, 2022, 10:12 PM IST

ಬೆಂಗಳೂರು :ನಗರದ ವಿದ್ಯಾಸಾಗರ್​​ ಶಾಲೆ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ಶಿಕ್ಷಕಿ ಶಶಿಕಲಾ ಅವರನ್ನು ವಜಾ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕಿ, ತಾವು ಹಿಜಾಬ್ ಕುರಿತು ಕೆಟ್ಟದಾಗಿ ಯಾವುದೇ ಮಾತನಾಡಿಲ್ಲ, ಅಲ್ಲದೆ ನನ್ನ ಮೇಲಿನ ಆರೋಪ ಸುಳ್ಳು ಎಂದಿದ್ದಾರೆ.

ವಜಾ ಆಗಿರುವ ಶಿಕ್ಷಕಿ ಶಶಿಕಲಾ ಸ್ಪಷ್ಟನೆ ನೀಡಿದ್ದು, ನಾನು ಯಾರಿಗೂ ಅವಮಾನ ಮಾಡಿಲ್ಲ. ಈ ವಿವಾದ ಹೇಗೆ ಬಂತು ಎಂದು ನನಗೆ ಶಾಕ್ ಆಗಿದೆ. ತರಗತಿಯಲ್ಲಿ ನಾನು ಯಾವುದೇ ಕೆಟ್ಟ ಮಾತು ಹೇಳಿಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಲಾಟೆ ಮಾಡಬೇಡಿ ಎಂದಿದ್ದೆ ಅಷ್ಟೇ ಎಂದಿದ್ದಾರೆ.

ನಡೆದಿದ್ದೇನು? :ನಗರದ ವಿದ್ಯಾಸಾಗರ್​​ ಶಾಲೆಯ ​​ಶಿಕ್ಷಕಿ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ಪೋಷಕರು, ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು.

ಶಿಕ್ಷಕಿ ಅಮಾನತು :ಈ ಬಗ್ಗೆ ಡಿಡಿಪಿಐ, ಆಡಳಿತ ಮಂಡಳಿ, ಪೋಷಕರು, ಶಿಕ್ಷಕರ ಜೊತೆ ಸಭೆ ನಡೆಸಿದ್ದರು. ​​​​​ಬಳಿಕ ಆಡಳಿತ ಮಂಡಳಿ ಶಿಕ್ಷಕಿಯನ್ನು ವಜಾ ಮಾಡಿತ್ತು. ಈ ಕುರಿತು ಪ್ರಿನ್ಸಿಪಾಲ್​​​​ ದೃಢಪಡಿಸಿದ್ದರು. ಬೋರ್ಡ್​ ಮೇಲೆ ಶಿಕ್ಷಕಿ ಕೆಎಸ್​ಎಲ್​​​​​​​​​​ ಎಂದು ಬರೆದಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದರು.

ಇದನ್ನೂ ಓದಿ: ಬೋರ್ಡ್ ಮೇಲೆ ಅವಮಾನಕರ ಬರಹ ಆರೋಪ : ಬೆಂಗಳೂರಿನಲ್ಲಿ ಶಾಲಾ ಶಿಕ್ಷಕಿ ವಜಾ

ಶಿಕ್ಷಕಿಯನ್ನು ಕೆಲಸದಿಂದ ತೆಗೆದಿರುವುದಕ್ಕೆ ಕೆಲವು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.

ABOUT THE AUTHOR

...view details