ಕರ್ನಾಟಕ

karnataka

ETV Bharat / state

ಗೂಂಡಾ ಕಾಯ್ದೆಯಡಿ ಬೆಂಗಳೂರಿನ ಕುಖ್ಯಾತ ರೌಡಿ ತಮಟೆ ಅರೆಸ್ಟ್ - etv bharat

ಬೆಂಗಳೂರಿನ ಕೆಂಗೇರಿ ಪೊಲೀಸರು ಕುಖ್ಯಾತ ರೌಡಿ ಕಿರಣ್ ಕುಮಾರ್ ಅಲಿಯಾಸ್ ತಮಟೆ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ತಮಟೆ

By

Published : Mar 24, 2019, 6:31 PM IST

Updated : Mar 24, 2019, 6:52 PM IST

ಬೆಂಗಳೂರು : ನಗರದ ಕುಖ್ಯಾತ ರೌಡಿಯನ್ನ ಗೂಂಡಾ ಕಾಯ್ದೆಯಡಿ ಬಂಧನ ಮಾಡುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಿರಣ್ ಕುಮಾರ್ ಅಲಿಯಾಸ್ ತಮಟೆ ಬಂಧಿತ ಆರೋಪಿ. ಈತ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್. ಕೆಂಗೇರಿ, ಬ್ಯಾಡೆಹಳ್ಳಿ ಮತ್ತು ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ, ಜಾತಿನಿಂದನೆ, ಪ್ರಾಣ ಬೆದರಿಕೆ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ.

ಹೀಗೆ ಸಮಾಜಘಾತುಕ ಕೆಲಸ ಮಾಡುತ್ತಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ‌‌. ಮತ್ತೊಂದೆಡೆ ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ. ಚನ್ನಣ್ಣನವರ ತಂಡವು ಕುಖ್ಯಾತ ರೌಡಿಗಳ‌‌ ಹೆಡೆಮುರಿ ಕಟ್ಟಲು‌ ಮುಂದಾಗಿದೆ.

Last Updated : Mar 24, 2019, 6:52 PM IST

ABOUT THE AUTHOR

...view details