ಬೆಂಗಳೂರು : ರೌಡಿಶೀಟರ್ ಸಹದೇವನ ಹತ್ಯೆ ಪ್ರಕರಣದ ಎಂಟು ಮಂದಿ ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿನಯ್, ಧರ್ಮ ಎಂಬುವರು ಸೇರಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ನವೆಂಬರ್ 8 ರಂದು ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಹದೇವನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಚುಂಚಘಟ್ಟ ಮುಖ್ಯ ರಸ್ತೆಯಲ್ಲಿ ಟೀ ಕುಡಿಯಲು ಬೇಕರಿ ಬಳಿ ಬಂದಿದ್ದ ಸಹದೇವನನ್ನು ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರೋಪಿಗಳ ಗುಂಪು ಹತ್ಯೆಗೈದು ಪರಾರಿಯಾಗಿತ್ತು.
ಯಾರದ್ದೋ ಮೇಲಿನ ಜಿದ್ದಿಗೆ ಬಲಿ : ಗಣೇಶ ನಿಮಜ್ಜನ ವಿಚಾರವಾಗಿ ಆರೋಪಿ ವಿನಯ್ ಹಾಗೂ ರಾಬರಿ ನವೀನ್ ಎಂಬಾತನ ನಡುವೆ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ವಿನಯ್ ಮತ್ತು ಆತನ ಸಹೋದರನ ಮೇಲೆ ನವೀನ್ ಹಲ್ಲೆ ಮಾಡಿದ್ದ. ಗಲಾಟೆಯ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ನವೆಂಬರ್ 8 ರಂದು ಚುಂಚಘಟ್ಟ ಮುಖ್ಯ ರಸ್ತೆಯ ಬೇಕರಿಯೊಂದರ ಬಳಿ ಸಹದೇವ ಟೀ ಕುಡಿಯಲು ಬಂದಿದ್ದ. ಈ ವೇಳೆ ಅಲ್ಲಿಯೇ ಇದ್ದ ವಿನಯ್ ಗ್ಯಾಂಗ್ ನವೀನ್ ಬಗ್ಗೆ ವಿಚಾರಿಸುತ್ತ ಸಹದೇವನೊಂದಿಗೆ ಕಿರಿಕ್ ಆರಂಭಿಸಿತ್ತು.
ಈ ವೇಳೆ 'ಯಾಕೆ ನಮ್ಮ ಹುಡುಗನ ಬಗ್ಗೆ ವಿಚಾರಿಸುತ್ತಿದ್ದೀರಿ?, ಆವತ್ತು ಕೊಟ್ಟಿದ್ದು ಸಾಕಾಗಿಲ್ವಾ?' ಎಂದಿದ್ದ. ಸಿಟ್ಟಿಗೆದ್ದ ವಿನಯ್ ಹಾಗೂ ಧರ್ಮ, ಸ್ಥಳದಲ್ಲಿ ಬೋಂಡಾ ಅಂಗಡಿಯವನ ಕೈಯಲ್ಲಿದ್ದ ಸೌಟು ಕಿತ್ತುಕೊಂಡು ಸಹದೇವನ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡು ನೆಲಕ್ಕೆ ಬಿದ್ದಾಗ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಸಹದೇವ ಸ್ಥಳದಲ್ಲೇ ಮೃತಪಟ್ಟಿದ್ದ.
ಇದನ್ನೂ ಓದಿ :ಜಮೀನು ವಿವಾದ : ಅಣ್ಣನ ಮಗನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ರೌಡಿಶೀಟರ್ ಸೀಮೆಎಣ್ಣೆ ಕುಮಾರ್
ಪ್ರಕರಣ ದಾಖಲಿಸಿಕೊಂಡಿದ್ದ ಪುಟ್ಟೇನಹಳ್ಳಿ ಪೊಲೀಸರು ಸದ್ಯಕ್ಕೆ ಆರೋಪಿಗಳಾದ ವಿನಯ್, ಧರ್ಮ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಹಿಂದೆ ಜೆ ಪಿ ನಗರದಲ್ಲಿ ದಾಖಲಾಗಿದ್ದ ಹತ್ಯೆ ಪ್ರಕರಣವೊಂದರಲ್ಲಿ ಎರಡನೇ ಆರೋಪಿಯಾಗಿದ್ದ ಸಹದೇವನನ್ನು ಬಿಟ್ಟರೆ ತಮಗೆ ಕಂಟಕವೆಂದು ಹತ್ಯೆಗೈದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.
ಇದನ್ನೂ ಓದಿ :ಸಿದ್ದಾಪುರ ಮಹೇಶ್ ಹತ್ಯೆ ಪ್ರಕರಣ : ಕೋರ್ಟ್ಗೆ ಶರಣಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ