ಬೆಂಗಳೂರು:ಈಗಾಗಲೇ ಕಳ್ಳತನ ಮಾಡಿರುವ ಬೈಕ್ನಲ್ಲಿ ಬಂದು ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರಾಜಧಾನಿಯ ಕುಖ್ಯಾತ ರಾಬರಿ ಗ್ಯಾಂಗ್ನ ಇಬ್ಬರು ಸದಸ್ಯರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಯಶವಂತ ಅಲಿಯಾಸ್ ತಿಪ್ಪೆ ಮತ್ತು ಕಿರಣ್ ಅಲಿಯಾಸ್ ಅಮಾವಾಸ್ಯೆ ಬಂಧಿತ ಆರೋಪಿಗಳು. ಖದೀಮರು ಕಳ್ಳತನ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನು ಓದಿ: ಆರೋಗ್ಯ ಸಹಾಯಕಿಯಿಂದಲೇ ವ್ಯಾಕ್ಸಿನ್ ಮಾರಾಟ : ಆರೋಪಿಯನ್ನು ಖೆಡ್ಡಾಗೆ ಕೆಡವಿದ ಆಫೀಸರ್ಸ್..!
ಆರೋಪಿಗಳಲ್ಲಿ ಯಶವಂತ ಅಲಿಯಾಸ್ ತಿಪ್ಪೆ ಹನುಮಂತನಗರ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಈ ಖದೀಮರು ಬೈಕ್ನಲ್ಲಿ ರಾತ್ರಿ ಸಮಯದಲ್ಲಿ ಒಂಟಿಯಾಗಿ ಒಡಾಡುವ ಡಿಲಿವರಿ ಬಾಯ್ಗಳನ್ನು ಅಡ್ಡಗಟ್ಡಿ ಸುಲಿಗೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.