ಬೆಂಗಳೂರು:ಸಾಮಾಜಿಕ ಜಾಲತಾಣದ ಒಂದೇ ಒಂದು ಪೋಸ್ಟ್ ನಿನ್ನೆ ರಾತ್ರಿ ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು.
ಪೊಲೀಸ್ ಠಾಣೆಗೆ ಬೆಂಕಿ, ಸಿಆರ್ಪಿಎಫ್ ವಾಹನ ಸುಟ್ಟು ಕರಕಲು: ಗಲಭೆಯ ಗಂಭೀರತೆಗೆ ಸಾಕ್ಷಿ ನೀಡುತ್ತಿವೆ ದೃಶ್ಯಗಳು - ಡಿಜೆ ಹಳ್ಳಿ ಗಲಭೆ ಸುದ್ದಿ
ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಉದ್ರಿಕ್ತ ಜನರ ಗುಂಪು ಪೊಲೀಸ್ ಠಾಣೆಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದು, ವಾಹನಗಳು ಸುಟ್ಟು ಕರಕಲಾಗಿವೆ.
ಉದ್ರಿಕ್ತ ಜನರು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಮಾತ್ರವಲ್ಲದೆ, ಭದ್ರತೆಗೆ ಬಂದಿದ್ದ ಸಿಆರ್ಪಿಎಫ್ ಸಿಬ್ಬಂದಿಯ ವಾಹಕ್ಕೂ ಬೆಂಕಿ ಹಚ್ಚಿದ್ದರು. ಪರಿಣಾಮ ಸಿಆರ್ಪಿಎಫ್ ಪೊಲೀಸರ ವಾಹನ ಸುಟ್ಟು ಕರಕಲಾಗಿದೆ. ಜೊತೆಗೆ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ಬೊಲೆರೋ ವಾಹನವನ್ನೂ ಕೂಡ ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ. ಇಷ್ಟೇ ಅಲ್ಲದೆ, ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಠಾಣೆಯ ಒಂದು ಭಾಗಕ್ಕೆ ಹಾನಿಯಾಗಿದೆ.
ರಸ್ತೆ ಬದಿ ನಿಲ್ಲಿಸಲಾಗಿದ್ದ ಹಲವು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಕೂಡ ಸುಟ್ಟು ಕರಲಾಗಿದ್ದು, ಘಟನಾ ಸ್ಥಳದ ಸದ್ಯದ ದೃಶ್ಯಗಳು ಗಲಭೆಯ ತೀವ್ರತೆಗೆ ಸಾಕ್ಷಿಯಾಗಿವೆ.