ಬೆಂಗಳೂರು:ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮೇಯರ್ ಸಂಪತ್ತ್ ರಾಜ್ ಜೊತೆ ಬಿಬಿಎಂಪಿ ಸದಸ್ಯ ಜಾಕೀರ್ ಹುಸೇನ್ ಕೈ ಜೋಡಿಸಿದ್ದಾರೆಂಬ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಪ್ರಾಥಮಿಕ ತನಿಖೆಗೆ ಕರೆದಿದ್ದರು. ಜಾಕೀರ್ ಹುಸೇನ್ನಿಂದ ಸುಮಾರು 16 ಪುಟಗಳ ಹೇಳಿಕೆ ದಾಖಲಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಕೇವಲ ವಿಚಾರಣೆಗೆ ಕರೆದಿದ್ರು ಎಂದು ಜಾಕೀರ್ ಹುಸೇನ್ ಅನ್ಕೊಂಡಿದ್ರು. ಆದರೆ, ಅಧಿಕಾರಿಗಳು ಜಾಕೀರ್ ಮೊಬೈಲ್ನ್ನು ರಿಟ್ರೀವರ್ ಮಾಡಲು ಮೊಬೈಲ್ ಜಪ್ತಿ ಮಾಡಿದ್ದರು.
ಮೂರು ದಿನದ ಹಿಂದೆ ನೋಟಿಸ್:ಘಟನೆ ನಡೆದು ಮೂರು ದಿನಗಳ ಬಳಿಕ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಜಾಕೀರ್ಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಕರೆ ಮಾಡಿ ತಿಳಿಸಲು ಪ್ರಯತ್ನಿಸಿದ್ದರು. ಸಿಸಿಬಿಯಿಂದ ಕರೆ ಮಾಡುತ್ತಿರುವುದು ಎಂದು ತಿಳಿದ ಜಾಕೀರ್ ಕಾಲ್ ಕಟ್ ಮಾಡಿದ್ದರು. ಬಳಿಕ ಸಹೋದರನ ಮೂಲಕ ಸಂಪರ್ಕಿಸಿದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪೊಲೀಸರ ಕರೆಯಿಂದ ಗಲಿಬಿಲಿಗೊಂಡ ಜಾಕೀರ್, ಮೊಬೈಲ್ ಮೆಸ್ಸೇಜ್ಗಳನ್ನು ಡಿಲೀಟ್ ಮಾಡದೆ ವಿಚಾರಣೆಗೆ ಹಾಜರಾಗಿದ್ದರು ಎನ್ನಲಾಗ್ತಿದೆ.
ನನಗೇನು ಗೊತ್ತಿಲ್ಲವೆಂದ ಜಾಕೀರ್:ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಜಾಕೀರ್ ಹುಸೇನ್, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವಾರ್ಡ್ ಪ್ರೇಜರ್ ಟೌನ್, ನನ್ನ ಕ್ಷೇತ್ರದಲ್ಲಿ ಏನೂ ಆಗಿಲ್ಲ. ನಾನು ಅಖಂಡ ಶ್ರೀನಿವಾಸ್ ಮೂರ್ತಿ ಜೊತೆ ಬಹಳ ಆತ್ಮೀಯನಾಗಿದ್ದೇನೆ. ಅವರು ಸಾವಿರಾರು ಮತಗಳ ಅಂತರದಿಂದ ಗೆದ್ದವರು, ನಾನು ಅವರ ಜೊತೆ ಯಾಕೆ ದ್ವೇಷ ಇಟ್ಟುಕೊಳ್ಳಲಿ ಎಂದಿದ್ದರು.
999 ಮೆಸ್ಸೇಜ್ ರೀಡ್ ಮಾಡದೆ ಪೆಂಡಿಂಗ್: ಜಾಕೀರ್ ವಿಚಾರಣೆಗೆ ಬಂದಾಗ ಮೊಬೈಲ್ ವಶಕ್ಕೆ ಪಡೆದ ಪೊಲೀಸರು, ಅದರಲ್ಲಿ ರೀಡ್ ಆಗದ 999 ಮೆಸ್ಸೇಜ್ಗಳ ಬಗ್ಗೆ ವಿಚಾರಿಸಿದ್ದಾರೆ. ಘಟನೆ ನಡೆದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ನಾನು ವಾಟ್ಸ್ ಆ್ಯಪ್ ಓಪನ್ ಮಾಡಿರಲಿಲ್ಲ ಎಂದು ಜಾಕೀರ್ ಉತ್ತರ ಕೊಟ್ಟಿದ್ದರು. ಪೊಲೀಸರು ರೀಡ್ ಆಗದ ಆ 999 ಮೆಸ್ಸೇಜ್ಗಳ ಪರಿಶೀಲಿಸಿದಾಗ, ಗಲಭೆ ನಡೆದ ದೃಶ್ಯ, ಕೆಲವರ ವಾಟ್ಸ್ ಆ್ಯಪ್ ಕರೆಗಳು ಕಂಡು ಬಂದಿವೆ. ಹೀಗಾಗಿ ರಿಟ್ರೀವರ್ ಮಾಡಲು ಪೊಲೀಸರು ಮೊಬೈಲ್ಅನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಹೀಗಾಗಿ, ಕಾರ್ಪೊರೇಟರ್ ಜಾಕೀರ್ಗೆ ವಾಟ್ಸ್ ಆ್ಯಪ್ ಸಂದೇಶಗಳು ಉರುಳಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.