ಕರ್ನಾಟಕ

karnataka

ETV Bharat / state

ಬೆಂಗಳೂರು ಗಲಭೆ ಪ್ರಕರಣ: ಆಸ್ಪತ್ರೆಗೆ ದಾಖಲಾಗಿ ಸಿಕ್ಕಿಬಿದ್ದ ಆರೋಪಿ! - ಬೆಂಗಳೂರು ಕೆ.ಜಿ ಹಳ್ಳಿ ಗಲಭೆ

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ನಡೆದ ದಿನ ಗುಂಡೇಟು ತಗುಲಿದರೂ ಹಲವು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಹೀಗೆ ತಲೆಮರೆಸಿಕೊಂಡ ಆರೋಪಿಗಳಲ್ಲಿ ಒಬ್ಬನಾದ ಇಮ್ರಾನ್ ಪಾಷಾ ಇದೀಗ ಆಸ್ಪತ್ರೆ ಮೂಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

By

Published : Aug 18, 2020, 11:57 AM IST

ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತಾಗಿದ್ದು, ದಿನಕ್ಕೊಬ್ಬರನ್ನು ಬಂಧಿಸುತ್ತಿದ್ದಾರೆ.

ಗಲಭೆ ನಡೆದ ದಿನ ಗುಂಡೇಟು ತಗುಲಿದ್ದರೂ ಹಲವು ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ಹೀಗೆ ತಲೆಮರೆಸಿಕೊಂಡ ಆರೋಪಿಗಳಲ್ಲಿ ಒಬ್ಬನಾದ ಇಮ್ರಾನ್ ಪಾಷಾ ಇದೀಗ ಆಸ್ಪತ್ರೆ ಮೂಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಗಲಭೆ ವೇಳೆ ಗುಂಡೇಟು ತಿಂದಿದ್ದ ಇಮ್ರಾನ್ ಪಾಷಾ ಸ್ಥಳದಿಂದ ಎಸ್ಕೇಪ್ ಆಗಿ, ಬಳಿಕ ಸಂಜಯ್​ ಗಾಂಧಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ. ಎದೆಗೆ ಗುಂಡು ಹೊಕ್ಕರೂ ಆಸ್ಪತ್ರೆಗೆ ದಾಖಲಾಗುವ ವೇಳೆ ಗೇಟ್ ಮೇಲೆ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಿದ್ದ. ಆದರೆ ವೈದ್ಯರು ಎಕ್ಸ್​ ರೇ ತೆಗೆದಾಗ ಆರೋಪಿಗೆ ಗುಂಡೇಟು ಬಿದ್ದಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವೈದ್ಯರ ಮಾಹಿತಿ ಆಧರಿಸಿ ಪೊಲೀಸರು ಪಾಷಾನನ್ನು ಬಂಧಿಸಿದ್ದಾರೆ. ​

ABOUT THE AUTHOR

...view details