ಕರ್ನಾಟಕ

karnataka

ETV Bharat / state

ವಾಜಿದ್​ ಪಾಷಾ ನೌಟಂಕಿ ಆಟ ಬೆಳಕಿಗೆ: ಸಿಸಿಬಿ ವಿಶೇಷ ತಂಡದಿಂದ ಫುಲ್​ ಡ್ರಿಲ್

ಎಸ್​ಡಿಪಿಐ ಹಾಗೂ ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವಾಜಿದ್ ಪಾಷಾ, ಗಲಭೆಗೆ ಕುಮ್ಮಕ್ಕು ನೀಡಿ, ತನಗೇನೂ ಗೊತ್ತಿಲ್ಲದಂತೆ ನಟಿಸುತ್ತಿದ್ದ. ಈ ವಿಚಾರ, ಆತನ ಹಿಂಬಾಲಕರೇ ಈಗ ಬಿಚ್ಚಿಟ್ಟಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ವಾಜಿದ್​ನನ್ನು ಬಂಧಿಸಿ ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

Bengaluru Riot Update
ವಾಜಿದ್​ ಪಾಷಾ ಬಂಧನ

By

Published : Aug 18, 2020, 11:05 AM IST

Updated : Aug 18, 2020, 11:45 AM IST

ಬೆಂಗಳೂರು : ಡಿ.ಜೆಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಜೆಡಿಎಸ್ ಮುಖಂಡ ವಾಜಿದ್ ಪಾಷಾನನ್ನು ಸಿಸಿಬಿ‌ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಎಸ್​ಡಿಪಿಐ ಹಾಗೂ ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವಾಜಿದ್ ಪಾಷಾ, ಗಲಭೆಗೆ ಕುಮ್ಮಕ್ಕು ನೀಡಿ, ತನಗೇನೂ ಗೊತ್ತಿಲ್ಲದಂತೆ ನಟಿಸುತ್ತಿದ್ದ. ಈ ವಿಚಾರ, ಆತನ ಹಿಂಬಾಲಕರೇ ಈಗ ಬಿಚ್ಚಿಟ್ಟಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ವಾಜಿದ್​ನನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಬಯಲಾಯ್ತು ಸತ್ಯ:ನವೀನ್ ಅವಹೇಳನಕಾರಿ ಪೋಸ್ಟ್​ ಹಾಕಿದ ತಕ್ಷಣ ಆತನನ್ನು ಯಾಕೆ ಬಂಧಿಸಿಲ್ಲ, ನಮ್ಮವರನ್ನಾದರೆ ತಕ್ಷಣ ಬಂಧಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ವಾಜಿದ್​, ಹುಡುಗರನ್ನು ಸೇರಿಸುವ ಹೊಣೆ ಹೊತ್ತಿದ್ದ ಎನ್ನಲಾಗಿದೆ. ಈ ವಿಚಾರವನ್ನು ಬಂಧಿತ ಆರೋಪಿಗಳು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.

ವಾಜಿದ್ ಹೇಳಿಕೊಟ್ಟಂತೆ ನಾವು ಮಾಡಿದ್ದೇವೆ:ನಮ್ಮದು ಏನೂ ತಪ್ಪಿಲ್ಲ ಬಿಟ್ಟು ಬಿಡಿ, ವಾಜಿದ್ ಕಳುಹಿಸಿದ ಮೆಸೇಜ್​​ ತೋರಿಸುತ್ತೇವೆ. ವಾಟ್ಸ್ಆ್ಯಪ್​ ಗ್ರೂಪ್​ಗೆ ಸೇರಿಸುವ ಸೂಚನೆ ನೀಡಿದ್ದ. ಅದನ್ನು ಆತನೇ ನಿಯಂತ್ರಣ ಮಾಡುತ್ತಿದ್ದ ಎಂದು ಬಂಧಿತ ಆರೋಪಿಗಳು ಅಧಿಕಾರಿಗಳ ಮುಂದೆ ಹೇಳಿದ್ದಾರೆ.

ಘಟನೆ ನಡೆದಾಗಿನಿಂದಲೂ ಎಸ್ಕೇಪ್ ಆಗಿದ್ದ ವಾಜಿದ್ :ಗಲಭೆ ನಡೆದ ದಿನದಿಂದ ವಾಜಿದ್​ ನಾಪತ್ತೆಯಾಗಿದ್ದ. ಪೊಲೀಸರು ಬಂಧಿಸಲು ಮನೆಗೆ ತೆರಳಿದಾಗ, ಆತನ ಎರಡೂ ಮನೆಗಳಿಗೆ ಬೀಗ ಹಾಕಿತ್ತು. ಆತ ಮನೆಯಲ್ಲಿ ಇಲ್ಲ ಎಂದು ಯಾಮಾರಿದ್ಧ ಪೊಲೀಸರು, ಅರ್ಧ ರಾತ್ರಿಯಲ್ಲಿ ವಾಪಸ್​ ಬಂದಿದ್ದರು. ಆದರೆ, ಆಮೇಲೆ ಅನುಮಾನ ಬಂದು, ಬೇರೆ ನಂಬರ್​ನಿಂದ ಕರೆ ಮಾಡಿದಾಗ, ಮನೆಯೊಳಗೆ ಮೊಬೈಲ್ ರಿಂಗ್​ ಆಗಿದೆ. ತಕ್ಷಣ ಬಾಗಿಲು ಓಪನ್ ಮಾಡು, ಇಲ್ಲ ಅಂದರೆ ಮನೆ ಬಾಗಿಲು ಒಡೆಯುತ್ತೇವೆ ಎಂದು ಡಿಸಿಪಿ ರವಿಕುಮಾರ್​ ಎಚ್ಚರಿಕೆ ನೀಡಿದ್ದರು. ಆ ಬಳಿಕ ವಾಜಿದ್​​ನನ್ನು ಬಂಧಿಸಲಾಗಿತ್ತು. ಸದ್ಯ, ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆತನ ಹಿನ್ನೆಲೆ ಜಾಲಾಡುತ್ತಿದ್ದಾರೆ.

Last Updated : Aug 18, 2020, 11:45 AM IST

ABOUT THE AUTHOR

...view details