ಕರ್ನಾಟಕ

karnataka

ಬೆಂಗಳೂರು ಗಲಭೆ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

By

Published : Aug 27, 2020, 9:18 AM IST

ಬೆಂಗಳೂರಿನಲ್ಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ‌ ಮುಜಾಮಿಲ್ ಪಾಷಾ ಹಾಗೂ ಕೆ.ಜಿ.ಹಳ್ಳಿ ಕಾರ್ಪೋರೇಟರ್ ಪತಿ ಖಲೀಂ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

bengaluru riot case
ಡಿಜೆ ಹಳ್ಳಿ ಗಲಭೆ ಪ್ರಕರಣ

ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳಾದ‌ ಮುಜಾಮಿಲ್ ಪಾಷಾ ಹಾಗೂ ಕೆ.ಜಿ.ಹಳ್ಳಿ ಕಾರ್ಪೋರೇಟರ್ ಪತಿ ಖಲೀಂ ಪಾಷಾನನ್ನು ರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಘಟನೆ ಸಂಬಂಧ ಸಿಸಿಬಿ ಡಿಸಿಪಿ ರವಿ ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಆರೋಪಿಗಳ ಮೊಬೈಲ್​‌ ರಿಟ್ರೇವ್ ಮಾಡಲು ಎಫ್​ಎಸ್​ಎಲ್​ಗೆ ರವಾನೆ ಮಾಡಲಾಗಿದೆ. ಇಬ್ಬರು ಆರೋಪಿಗಳ ಪೈಕಿ ಮುಜಾಮಿಲ್ ಪಾಷಾ ತನಗೂ ಘಟನೆಗೂ ಸಂಭಂಧವಿಲ್ಲ. ನವೀನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಾರಣ ನಾನು ಠಾಣೆಗೆ ತೆರಳಿ ದೂರು ನೀಡಿದ್ದೆ. ಈ ವೇಳೆ ಇನ್ಸ್​ಪೆಕ್ಟರ್ ಪ್ರಕರಣ ದಾಖಲಿಸಲು ತಡವಾಗುತ್ತೆ ಎಂದಿದ್ದಕ್ಕೆ ಪ್ರಶ್ನೆ ಮಾಡಿದ್ದೆ. ಅದು ಬಿಟ್ಟರೆ ನನಗೂ ಗಲಭೆಗೂ ಸಂಭಂಧವಿಲ್ಲಎಂದಿದ್ದಾನೆ.

ಆದರೆ ಈತ ಘಟನೆಗೆ ಪ್ರಚೋದನೆ ನೀಡಿರುವ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಿದೆ. ಇದರ ಆಧಾರದ ಮೇರೆಗೆ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದು, ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ವಶಕ್ಕೆ ಪಡೆಯಲಿದ್ದಾರೆ. ‌ಮತ್ತೊಂದೆಡೆ ಕೆ.ಜಿ.ಹಳ್ಳಿ ಕಾರ್ಪೋರೇಟರ್ ಪತಿ ಖಲಿಂ ಪಾಷಾ ಕೂಡ ಗಲಭೆ ನಡೆದಾಗ ಘಟನಾ ಸ್ಥಳದಲ್ಲಿ ತಾನು ಇರಲಿಲ್ಲ. ಗಲಭೆ ನಡೆಯುವ ವಿಚಾರ ತಿಳಿದು ಠಾಣೆ ಬಳಿ ಬಂದಿರುವುದಾಗಿ ಹೇಲಿದ್ದಾನೆ. ಆದರೆ ಗಲಭೆಗೆ‌ ಕುಮ್ಮಕ್ಕು ನೀಡಿದ ಬಗ್ಗೆ ಪೊಲೀಸರ ಬಳಿ ಸಾಕ್ಷಿ ‌ಇದೆ ಎನ್ನಲಾಗಿದೆ. ಸದ್ಯ ಪೊಲೀಸರು ಕೆಲ ಹೇಳಿಕೆ ಪಡೆದು ಮೊಬೈಲ್ ವಶಕ್ಕೆ ಪಡೆದುಕೊಂಡು ಜೈಲಿಗೆ ಕಳುಹಿಸಿದ್ದಾರೆ. ಮುಂದಿನ ದಿನದಲ್ಲಿ ವಿಚಾರಣೆ ಅಗತ್ಯವಿದ್ದಾರೆ ಮತ್ತೆ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details