ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪದ ಮೇಲೆ ಗಲಭೆಕೋರ ಮುಬಾರಕ್ ಎಂಬಾತನನ್ನು ಬಂಧಿಸುವಲ್ಲಿ ಸದ್ಯ ಡಿ.ಜೆ.ಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಗಲಭೆ ಪ್ರಕರಣ: ಡಿಸಿಪಿ ಕಾರಿಗೆ ಡಿಚ್ಚಿ ಹೊಡೆದು ಜಖಂ ಮಾಡಿದ್ದ ಆರೋಪಿ ಅರೆಸ್ಟ್
ಬೆಂಗಳೂರು ಗಲಭೆ ನಡೆದ ದಿನ ಡಿಸಿಪಿ ಕಾರಿಗೆ ಡಿಚ್ಚಿ ಹೊಡೆದು ಜಖಂಗೊಳಿಸಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕಾರಿಗೆ ಡಿಚ್ಚಿ ಹೊಡೆದು ಜಖಂ ಮಾಡಿದವ ಪೊಲೀಸರ ಅತಿಥಿ..!
ಸಾಮಾಜಿಕ ಜಾಲತಾಣದಲ್ಲಿ ನವೀನ್ ಪೋಸ್ಟ್ ಹಾಕಿದಾಗ ಕೆಲವರು ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದರು. ಡಿಸಿಪಿ ಶರಣಪ್ಪ ವ್ಯಾಪ್ತಿಯಲ್ಲಿ ಬರುವ ಡಿ.ಜೆ.ಹಳ್ಳಿ ಠಾಣೆಗೆ ಭೇಟಿ ನೀಡಿದ ವೇಳೆ ಡಿ.ಜೆ.ಹಳ್ಳಿ ಠಾಣೆ ಮುಂಭಾಗದಲ್ಲಿ ನಿಲ್ಲಸಿದ್ದ ಕಾರನ್ನು ಮುಬರಾಕ್ ಗ್ಯಾಂಗ್ ಧ್ವಂಸ ಮಾಡಿರುವ ದೃಶ್ಯ ಪೊಲೀಸರ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇತರರು ರಾಡು, ದೊಣ್ಣೆಗಳಿಂದ ಕಾರು ಜಖಂ ಮಾಡುತ್ತಿದ್ದರು. ಈ ವೇಳೆ ಡಿಸಿಪಿ ಕಾರಿಗೆ ಡಿಚ್ಚಿ ಹೊಡೆದು ಮುಬಾರಕ್ ತನ್ನ ಪುಂಡತನ ತೋರಿಸಿದ್ದ ಎನ್ನಲಾಗಿದೆ.