ಕರ್ನಾಟಕ

karnataka

ETV Bharat / state

ನವೀನ್​ ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಗಳು ಅಂದರ್​​: ತನಿಖೆ ಮತ್ತಷ್ಟು ತೀವ್ರ - ಬೆಂಗಳೂರು ಗಲಭೆ ಆರೋಪಿಗಳ ಬಂಧನ

ಅವಹೇಳನಕಾರಿ ಪೋಸ್ಟ್ ಹಾಕಿದ್ದರಿಂದ ರೊಚ್ಚಿಗೆದ್ದು, ಆರೋಪಿ ನವೀನ್ ಮನೆಗೆ ಬೆಂಕಿ ಹಾಕಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Bengaluru Riot accused arrest
ನವೀನ್​ ಮನೆಗೆ ಹಚ್ಚಿದ್ದ ಆರೋಪಿಗಳು ಅಂಧರ್​

By

Published : Aug 18, 2020, 1:31 PM IST

ಬೆಂಗಳೂರು: ​ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್​ ಮಾಡಿದ್ದ ಆರೋಪಿ ನವೀನ್ ಮನೆಗೆ ಬೆಂಕಿ ಹಚ್ಚಿದ್ದ ಪುಂಡರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಲಭೆ ನಡೆದ ದಿನ ನವೀನ್ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಆರೋಪಿಗಳು, ಬಳಿಕ ಎಸ್ಕೇಪ್ ಆಗಿ ತುಮಕೂರಿನ ತಿಪಟೂರಿನಲ್ಲಿ ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಸತತ ಐದು ದಿನಗಳಿಂದ ಬೆನ್ನಟ್ಟಿದ್ದ ಡಿ.ಜೆ ಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ, ವಿಚಾರಣೆ ನಡೆಯುತ್ತಿದ್ದು, ಇವರ ಜೊತೆ ಸಂಪರ್ಕದ್ದವರ ಮಾಹಿತಿ ಕಲೆ ಹಾಕಲಾಗುತ್ತಿದೆ.

ನವೀನ್ ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಸ್ವಲ್ಪ ಹೊತ್ತಿನಲ್ಲೇ ಆರೋಪಿಗಳು ಆತನ ಮನೆಗೆ ಬೆಂಕಿ ‌ಹಾಕಿದ್ದರು‌. ಈ ಕುರಿತು ನವೀನ್​ ತಂದೆ, ಡಿ.ಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆಯಿಂದ ನವೀನ್​ ಕುಟುಂಬಕ್ಕೆ ಅಂದಾಜು ಮೂರು ಕೋಟಿ ನಷ್ಟವಾಗಿದೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details