ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅವಾಂತರ ಸೃಷ್ಟಿಸಿದ್ದ ಮಳೆ ಸದ್ಯಕ್ಕೆ ಬಿಡುವು ಕೊಟ್ಟಿದೆ. ಮಳೆಗೆ ತತ್ತರಿಸಿದ್ದ ಮಹಾದೇವಪುರ, ರೈನ್‌ಬೋ ಬಡಾವಣೆ, ಸರ್ಜಾಪುರ, ಬೆಳ್ಳಂದೂರು ರಸ್ತೆಗಳು ಸೇರಿದಂತೆ ಇತರ ಪ್ರದೇಶಗಳ ಅಪಾರ್ಟ್ಮೆಂಟ್ಗಳ ಸ್ಥಿತಿ ಸುಧಾರಿಸುತ್ತಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.
ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ: ಮುಖ್ಯವಾಗಿ ಕಳೆದ ಒಂದು ವಾರ ಸುರಿದ ಭಾರಿ ಮಳೆಗೆ ಬೆಳ್ಳಂದೂರು, ಸರ್ಜಾಪುರ, ಮಹದೇವಪುರ ವ್ಯಾಪ್ತಿಯಲ್ಲಿ ಜಲಪ್ರಳಯ ಉಂಟಾಗಿತ್ತು. ಮನೆಗಳಿಗೆ ನುಗ್ಗಿದ ನೀರು ಜನ ಮನೆ ಬಿಟ್ಟು ಬೇರೆಡೆ ಹೋಗುವಂತಾಗಿತ್ತು. ಮನೆಯಲ್ಲಿರುವ ಪೀಠೋಪಕಾರಣಗಳು ಹಾಳಾಗಿವೆ. ಕಾಂಪೌಂಡ್ ಒಳಗೆ ನಿಲ್ಲಿಸಿದ ವಾಹನಗಳು ನೀರಲ್ಲೇ ನಿಂತು, ಹಾಳಾಗಿವೆ. ರಸ್ತೆಗಳು ಕೆರೆಗಳಂತಾಗಿದ್ದವು. ಆದ್ರೆ ಸದ್ಯ ಮಳೆ ಕಡಿಮೆ ಆಗಿ, ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ.
ಜನರು ಓಡಾಟ ಯಥಾಸ್ಥಿತಿಗೆ ಬಂದಿದೆ. ಜನರು ಮನೆಗಳತ್ತ ತೆರಳಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಕೆಟ್ಟು ನಿಂತ ವಾಹನಗಳನ್ನು ಗ್ಯಾರೇಜ್ನತ್ತ ಸಾಗಿತ್ತಿದ್ದಾರೆ. ಸರ್ಕಾರ ಮತ್ತು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಾ ಸಾರ್ವಜನಿಕರು ತಮ್ಮ ಮನೆ ಹಾಗೂ ಲೇಔಟ್ಗಳನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದಾರೆ.