ಬೆಂಗಳೂರು:ರೆಡ್ ಝೋನ್, ಗ್ರೀನ್ ಝೋನ್ ಗಳಿಗೆ ಪ್ರತ್ಯೇಕವಾದ ಲಾಕ್ಡೌನ್ ಸಡಿಲಿಕೆ ನಿಯಮ ಇರುವುದರಿಂದ ಬೆಂಗಳೂರಿನ ವಾರ್ಡ್ ಗಳನ್ನು ಪುನರ್ ವಿಂಗಡಿಸಲಾಗಿದೆ.
ಬೆಂಗಳೂರು ನಗರದ ಕೆಂಪು, ಹಸಿರು ವಲಯ ವಿಭಜನೆಯ ಹೊಸ ಪಟ್ಟಿ - ಬೆಂಗಳೂರು ನಗರದ ರೆಡ್ ಝೋನ್ ಪ್ರದೇಶಗಳು
ಬೆಂಗಳೂರಿನ ವಾರ್ಡ್ ಗಳನ್ನು ಪುನರ್ ವಿಂಗಡಿಸಿ ರೆಡ್ ಝೋನ್, ಗ್ರೀನ್ ಝೋನ್ ಗೆ ಒಳಪಟ್ಟಿರುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ನಗರದ ರೆಡ್ ಝೋನ್, ಗ್ರೀನ್ ಝೋನ್ ವಿಭಜನೆಯ ಹೊಸ ಪಟ್ಟಿ
ಗ್ರೀನ್ ಝೋನ್ ಗಳಲ್ಲಿ ಕೈಗಾರಿಕೆ ಆರಂಭಿಸಲು ಅವಕಾಶ ನೀಡುವಂತೆ ಈಗಾಗಲೇ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಅದರಂತೆ ಹೊಸ ರೀತಿಯ ವಾರ್ಡ್ ವಿಭಜನೆ ಇಲ್ಲಿದೆ.
ಪಾದರಾಯನಪುರ ವಾರ್ಡ್ ಹಾಗೂ ಹೊಂಗಸಂದ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣ ಇರುವುದರಿಂದ ಈ ಎರಡು ವಾರ್ಡ್ಗಳನ್ನು ಮಾತ್ರ ರೆಡ್ ಝೋನ್ ಹಾಗೂ ಕಂಟೈನ್ ಮೆಂಟ್ ಝೋನ್ ಎಂದು ವಿಂಗಡಿಸಲಾಗಿದೆ. 198 ವಾರ್ಡ್ ಗಳಲ್ಲಿ ಒಂದೂ ಕೊರೊನಾ ಪ್ರಕರಣ ಇಲ್ಲದ 173 ವಾರ್ಡ್ ಗಳನ್ನು ಗ್ರೀನ್ ವಾರ್ಡ್ ಗಳಾಗಿ ವಿಂಗಡಿಸಲಾಗಿದೆ.