ಕರ್ನಾಟಕ

karnataka

ETV Bharat / state

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರಿಗೆ 43ನೇ ಸ್ಥಾನ: ಸಾರ್ವಜನಿಕರಿಂದ ಟೀಕೆ - ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2022

ಸ್ವಚ್ಛ ಸರ್ವೇಕ್ಷಣಾ 2022ರ ಪಟ್ಟಿಯಲ್ಲಿರುವ 45 ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನದಲ್ಲಿದೆ.

Bengaluru
ಬೆಂಗಳೂರು

By

Published : Oct 4, 2022, 6:58 AM IST

ಬೆಂಗಳೂರು:ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2022ರ ಪ್ರಕಾರ 45 ನಗರಗಳ ಪಟ್ಟಿಯಲ್ಲಿ ಸಿಲಿಕಾನ್​​ ಸಿಟಿ 43ನೇ ಸ್ಥಾನ ಪಡೆದುಕೊಂಡಿದೆ. ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ರ‍್ಯಾಂಕಿಂಗ್​ನಲ್ಲಿ 15ರಷ್ಟು ಕುಸಿತ ಕಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿ ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಮಾತನಾಡಿ, ಕಳೆದ ಬಾರಿ 10 ಸಾವಿರ ಜನರಿಂದ ಪ್ರತಿಕ್ರಿಯೆ ಪಡೆಯಲಾಗಿದ್ದು, ಈ ಬಾರಿ ಅದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸವಾಲು ವಿಭಿನ್ನವಾಗಿದ್ದು, ದೊಡ್ಡ ದೊಡ್ಡ ನಗರಗಳಿಗೆ ಸಣ್ಣ ನಗರಗಳನ್ನು ಹೋಲಿಕೆ ಮಾಡುವುದು ತಪ್ಪಾಗುತ್ತದೆ ಎಂದಿದ್ದಾರೆ.

ದೊಡ್ಡ ಅವಮಾನ:ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಪ್ರಸ್ತುತ ಅಧ್ಯಕ್ಷ ಶ್ರೇಯಾಂಕ, ಇದು ದೊಡ್ಡ ಅವಮಾನ ಎಂದು ಬಣ್ಣಿಸುವುದರೊಂದಿಗೆ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ:ಸ್ವಚ್ಛ ಸರ್ವೇಕ್ಷಣ್ ರ‍್ಯಾಂಕಿಂಗ್ ಪಟ್ಟಿ: 194ನೇ ಸ್ಥಾನದಿಂದ 214ನೇ ಸ್ಥಾನಕ್ಕೆ ಇಳಿದ ಬೆಂಗಳೂರು

ABOUT THE AUTHOR

...view details