ಬೆಂಗಳೂರು:ಪಾನಮತ್ತ ವಾಹನ ಚಾಲನೆಯಿಂದ ಮಾತ್ರವಲ್ಲದೆ, ಮಾದಕ ದ್ರವ್ಯಗಳನ್ನು ಸೇವಿಸಿ ವಾಹನ ಚಾಲನೆ, ವೀಲಿಂಗ್ ಕೃತ್ಯಗಳಿಂದಲೂ ಅಪಘಾತ ಸಂಭವಿಸುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ರಕ್ತದ ಮಾದರಿಯೊಂದಿಗೆ ನಾರ್ಕೋಟಿಕ್ಸ್ ಪರೀಕ್ಷೆ ಮಾಡಿಸುವ ಕೆಲಸವನ್ನೂ ಬೆಂಗಳೂರು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳ ಪೈಕಿ ಮೂರು ಮಾರಣಾಂತಿಕ ಹಾಗೂ ಐದು ಸಾಧಾರಣ ಅಪಘಾತ ಪ್ರಕರಣಗಳಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡಿರುವುದು ಕಂಡುಬಂದಿದೆ. ಅಲ್ಲದೇ ಒಂದು ವೀಲಿಂಗ್ ಪ್ರಕರಣದಲ್ಲಿ, ಆರೋಪಿಯು ಮಾದಕ ಸೇವಿಸಿರುವುದು ಕಂಡುಬಂದಿದ್ದು, ಆತನ ವಿರುದ್ಧ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಎಂ. ಎನ್. ಅನುಚೇತ್ ತಿಳಿಸಿದ್ದಾರೆ.