ಬೆಂಗಳೂರು :ಕೊರೊನಾ ಹೋರಾಟದಲ್ಲಿರುವ ಪೊಲೀಸರಿಗೆ ಮುಂಜಾಗೃತ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರ ಪೊಲೀಸ್ ಇಲಾಖೆ ಕಿರು ಚಿತ್ರವೊಂದನ್ನು ಬಿಡುಗಡೆ ಮಾಡಿದೆ.
ಸಿಬ್ಬಂದಿ ಜಾಗೃತಿಗಾಗಿ ಕಿರುಚಿತ್ರ ಬಿಡುಗಡೆ ಮಾಡಿದ ಬೆಂಗಳೂರು ಪೊಲೀಸ್ - Bengaluru Police released short film
ಸಿಬ್ಬಂದಿಗೆ ಕೊರೊನಾ ಮುಂಜಾಗೃತ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಕಿರುಚಿತ್ರವೊಂದನ್ನು ಬಿಡುಗಡೆಗೊಳಿಸಿದೆ.
'ಸಮಾಜ ಕಾಯುವ ಮುನ್ನ ನಾವು ಜಾಗೃತರಾದರೆ ಚೆನ್ನ' ಎಂಬ ಶೀರ್ಷಿಕೆಯ ಈ ಕಿರುಚಿತ್ರವನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ಮೇರೆಗೆ ನಿರ್ಮಿಸಲಾಗಿದೆ. ಚಿತ್ರದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವ ವೇಳೆ ಯಾವ ರೀತಿ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು ಎಂಬುವುದನ್ನು ತೋರಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮನೆಯಲ್ಲಿ ಹೇಗಿರಬೇಕು, ಕರ್ತವ್ಯಕ್ಕೆ ಹೊರಡುವಾಗ ಏನೆಲ್ಲಾ ಮುಂಜಾಗೃತ ಕ್ರಮ ಪಾಲಿಸಬೇಕು ಸೇರಿದಂತೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಕೆ ಮಾಡುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಕುರಿತು ಕಿರುಚಿತ್ರದಲ್ಲಿ ಜಾಗೃತಿ ಮೂಡಿಸಲಾಗಿದೆ.