ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳು; ಆಸ್ಪತ್ರೆ ಬಿಲ್​ ಮನ್ನಾ ಮಾಡಿಸಿ ಬೆಂಗಳೂರು ಪೊಲೀಸರ ಮಾನವೀಯತೆ - ಆಸ್ಪತ್ರೆ ಬಿಲ್​ ಪಾವತಿಸಿದ ಬೆಂಗಳೂರು ಪೊಲೀಸರು

ಅಪಘಾತದಲ್ಲಿ ಪೋಷಕರ ಕಳೆದುಕೊಂಡು, ಆಸ್ಪತ್ರೆ ಬಿಲ್​ ಪಾವತಿಸಲೂ ಆಗದೆ ಸಂಕಷ್ಟದಲ್ಲಿದ್ದ ಸಹೋದರಿಯರಿಗೆ ಬೆಂಗಳೂರು ಪೊಲೀಸರು ಶುಲ್ಕ ಮನ್ನಾ ಮಾಡಿಸುವ ಮೂಲಕ ಮಾನವೀಯತೆ ತೋರಿದ್ದಾರೆ.

bengaluru-police-helped-girls-who-lost-parents-in-road-accident
ಅಪಘಾತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳು.. ಆಸ್ಪತ್ರೆ ಬಿಲ್​ ಪಾವತಿಸಿ ಬೆಂಗಳೂರು ಪೊಲೀಸರ ಮಾನವೀಯತೆ

By

Published : Jul 15, 2022, 1:03 PM IST

Updated : Jul 15, 2022, 1:15 PM IST

ಬೆಂಗಳೂರು:ರಸ್ತೆ ಅಪಘಾತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳ ನೆರವಿಗೆ ನಿಲ್ಲುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಪೋಷಕರಿಲ್ಲದ ದುಃಖದ ನಡುವೆ ಆಸ್ಪತ್ರೆ ಶುಲ್ಕವನ್ನೂ ಭರಿಸಲಾಗದೆ ಕಂಗಾಲಾಗಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಅಧಿಕಾರಿಗಳು ನೆರವಾಗಿದ್ದಾರೆ.

ಮೃತ ದಂಪತಿ

ಬೆಂಗಳೂರು ಪಶ್ಚಿಮ ವಿಭಾಗದ ಸಂಚಾರಿ ಆಯುಕ್ತ ಕುಲದೀಪ್ ಕುಮಾರ್ ಜೈನ್, ಬ್ಯಾಟರಾಯನಪುರ ಸಂಚಾರಿ ಠಾಣೆ ಇನ್ಸ್​ಪೆಕ್ಟರ್​ ರೂಪಾ ಹಡಗಲಿ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್​ಪೆಕ್ಟರ್ ಲೋಹಿತ್ ಒಟ್ಟಿಗೆ ಸಹಾಯ ಮಾಡಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ:ವಿಡಿಯೋ: ಮೂರ್ಚೆ ರೋಗಿಯ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದ ಮಹಿಳಾ ಪಿಎಸ್ಐ

ಕಳೆದ ವಾರ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಟಿಪ್ಪರ್ ಹಾಗೂ ಬೈಕ್‌ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ವಿಜಯಕಲಾ (37) ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅವರ ಪತಿ ಯೋಗೇಂದ್ರ (41) ಮೂರು ದಿನಗಳ ಬಳಿಕ ನಾಗರಭಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಒಬ್ಬರ ಹಿಂದೆ ಒಬ್ಬರಂತೆ ಪೋಷಕರನ್ನು ಕಳೆದುಕೊಂಡ ಹೆಣ್ಣುಮಕ್ಕಳಿಬ್ಬರೂ 5 ಲಕ್ಷ 72 ಸಾವಿರ ರೂ. ಆಸ್ಪತ್ರೆ ಶುಲ್ಕ ಕಟ್ಟಲಾಗದೇ ಪರಿತಪಿಸುತ್ತಿದ್ದರು.

ಆಸ್ಪತ್ರೆ ಬಿಲ್​ ಪಾವತಿಸಿ ಬೆಂಗಳೂರು ಪೊಲೀಸರ ಮಾನವೀಯತೆ

ಈ ವೇಳೆ ಪೊಲೀಸರೇ ಮುಂದೆ ನಿಂತು ಆಸ್ಪತ್ರೆ ಆಡಳಿತ ಮಂಡಳಿ ಜೊತೆ ಮಾತನಾಡಿ ಶುಲ್ಕ ಮನ್ನಾ ಮಾಡಿಸಿದ್ದಾರೆ. ಪೊಲೀಸರ ಸಮಾಜಮುಖಿ ಕಾರ್ಯ ಎಲ್ಲೆಡೆ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ಇದನ್ನೂ ಓದಿ:ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಪಾರದರ್ಶಕ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ‌ ಸಂತೋಷ್ ಪತ್ನಿ ಪತ್ರ

Last Updated : Jul 15, 2022, 1:15 PM IST

For All Latest Updates

ABOUT THE AUTHOR

...view details