ಬೆಂಗಳೂರು: ಮಿನಿ ಟ್ರಕ್‌ನಲ್ಲಿ ತಮಿಳುನಾಡಿಗೆ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ನಗರದ ಪೊಲೀಸರು ಬಂಧಿಸಿ, 59 ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ತರಕಾರಿ ಚೀಲಗಳಡಿ ಅಡಗಿಸಿಟ್ಟು ತಮಿಳುನಾಡಿಗೆ ಸಾಗಿಸುತ್ತಿದ್ದ ಮದ್ಯ ವಶಕ್ಕೆ - ಬೆಂಗಳೂರಿನಿಂದ ತಮಿಳುನಾಡಿಗೆ ಸಾಗಿಸುತ್ತಿದ್ದ ಮದ್ಯ ವಶಕ್ಕೆ
ತಮಿಳುನಾಡಿಗೆ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ನಗರದ ಪೊಲೀಸರು ಬಂಧಿಸಿ, 509 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
![ತರಕಾರಿ ಚೀಲಗಳಡಿ ಅಡಗಿಸಿಟ್ಟು ತಮಿಳುನಾಡಿಗೆ ಸಾಗಿಸುತ್ತಿದ್ದ ಮದ್ಯ ವಶಕ್ಕೆ bengaluru-police-arrested-two-persons-smuggling-liquor-into-tamil-nadu](https://etvbharatimages.akamaized.net/etvbharat/prod-images/768-512-12066587-thumbnail-3x2-news.jpg)
ಮಿನಿ ಟ್ರಕ್‌ನಲ್ಲಿ ತಮಿಳುನಾಡಿಗೆ ಸಾಗಿಸುತ್ತಿದ್ದ 59 ಬಾಕ್ಸ್ ಮದ್ಯ ವಶಕ್ಕೆ
ಖದೀಮರು ತರಕಾರಿ ಚೀಲಗಳ ಕೆಳಗೆ ಮದ್ಯದ ಬಾಕ್ಸ್ಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು. ಮಾರುಕಟ್ಟೆ ವೃತ್ತ ಪ್ರದೇಶದ ಸಮೀಪದ ಚೆಕ್‌ಪಾಯಿಂಟ್‌ನಲ್ಲಿ ತರಕಾರಿ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದ 59 ಬಾಕ್ಸ್ನಲ್ಲಿ 509 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.