ಬೆಂಗಳೂರು: ಹಲವು ವರ್ಷಗಳಿಂದ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡು ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ರೌಡಿಶೀಟರ್ ತಬ್ರೇಜ್ ಪಾಷ ಅಲಿಯಾಸ್ ಚೋಟಾ ಟೈಗರ್ ಎಂಬಾತನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
ಫೈನಾನ್ಸಿಯರ್ ಟಾರ್ಗೆಟ್ ಮಾಡಿ ಹಣ ವಸೂಲಿ: ಚೋಟಾ ಟೈಗರ್ ಅರೆಸ್ಟ್ - ಬೆಂಗಳೂರು ನಟೋರಿಯಸ್ ರೌಡಿ ಬಂಧನ
ಫೈನಾನ್ಸಿಯರ್ಗಳನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ರೌಡಿ ಮೊಹಮ್ಮದ್ ತಬ್ರೇಜ್ ಪಾಷ ಅಲಿಯಾಸ್ ಚೋಟಾ ಟೈಗರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಚೋಟಾ ಟೈಗರ್ ಅರೆಸ್ಟ್
ನಗರದಲ್ಲಿ ಫೈನಾನ್ಸಿಯರ್ಗಳನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಈತ, ಮೊದಲು ತನ್ನ ಸಹಚರರನ್ನು ಕಳುಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ಕೊಡದಿದ್ದವರ ಕಚೇರಿಗೆ ನುಗ್ಗಿ ಲಾಂಗು-ಮಚ್ಚು ತೋರಿಸಿ ಹೆದರಿಸಿ ದರೋಡೆ ಮಾಡುತ್ತಿದ್ದನಂತೆ.
ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸದ್ಯ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.