ಕರ್ನಾಟಕ

karnataka

ಸಾಕು ನಾಯಿಗಳು ಕಚ್ಚಿದ ಆರೋಪ: ಪೊಲೀಸರ ವಿರುದ್ಧ ದೂರುದಾರೆಯ ಆಕ್ರೋಶ

By ETV Bharat Karnataka Team

Published : Nov 7, 2023, 2:21 PM IST

Updated : Nov 7, 2023, 2:56 PM IST

ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ವೇಳೆ ನಾಯಿಗಳು ಕಚ್ಚಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ಪೊಲೀಸರ ತನಿಖೆಯ ವಿರುದ್ಧ ದೂರುದಾರೆ ಕಿಡಿಕಾರಿದ್ದಾರೆ.

ಪೊಲೀಸರ ತನಿಖೆ ವಿರುದ್ಧ ದೂರುದಾರೆ ಆಕ್ರೋಶ
ಪೊಲೀಸರ ತನಿಖೆ ವಿರುದ್ಧ ದೂರುದಾರೆ ಆಕ್ರೋಶ

ಬೆಂಗಳೂರು:ಪಾರ್ಕಿಂಗ್ ವಿಚಾರವಾಗಿ ಗಲಾಟೆ ವೇಳೆ ನಾಯಿಗಳು ಕಚ್ಚಿರುವುದಾಗಿ ನಟ ದರ್ಶನ್ ಹಾಗೂ ಅವರ ಮನೆಯ ಕೆಲಸಗಾರನ ವಿರುದ್ಧ ದೂರು ದಾಖಲಿಸಿದ್ದ ಅಮಿತಾ ಜಿಂದಾಲ್ ಎಂಬವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್.ನಗರ ಠಾಣೆಗೆ ಇಂದು (ಮಂಗಳವಾರ) ಹಾಜರಾಗಿದ್ದ ಅವರು, "ಠಾಣೆಗೆ ಬಂದರೂ ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಠಾಣೆಗೆ ಆಗಮಿಸುವಂತೆ ಪೊಲೀಸರು ತಿಳಿಸಿದ್ದರಿಂದ ಆರ್.ಆರ್.ನಗರ ಠಾಣೆಗೆ ಇಂದು ಬೆಳಿಗ್ಗೆಯೇ ಅಮಿತಾ ಜಿಂದಾಲ್ ಹಾಜರಾಗಿದ್ದರು. ''ಸಂಬಂಧಪಟ್ಟ ಅಧಿಕಾರಿಗಳು ಇಲ್ಲ, ಅದೇ ಅಧಿಕಾರಿಗಳು ಬರಬೇಕು ಎನ್ನುತ್ತಿದ್ದಾರೆ. 9 ಗಂಟೆಯ ನಂತರ ಬರುವಂತೆ ಪೊಲೀಸರು ಸೂಚಿಸಿದರು. ಆದರೆ, 9.30 ಆದರೂ ಸಂಬಂಧಪಟ್ಟ ಅಧಿಕಾರಿ ಬರಲಿಲ್ಲ. 10.30ರ ನಂತರ ಬನ್ನಿ ಎನ್ನುತ್ತಿದ್ದಾರೆ. ನಾನೂ ಸಹ ಕೆಲಸಕ್ಕೆ ಹೋಗಬೇಕಿದೆ‌" ಎಂದು ಅಮಿತಾ ಆಕ್ರೋಶ ವ್ಯಕ್ತಪಡಿಸಿದರು. "ಸೂಕ್ತ ನ್ಯಾಯ ದೊರೆಯದಿದ್ದರೆ, ನ್ಯಾಯಾಲಯದ ಮುಂದೆ ಹೋಗುತ್ತೇನೆ. ವಕೀಲೆಯಾಗಿರುವ ನನಗೇನು ಮಾಡಬೇಕೆಂದು ಗೊತ್ತಿದೆ'' ಎಂದು ಅವರು ತಿಳಿಸಿದರು.

ನಟ ದರ್ಶನ್, ಮನೆ ಕೆಲಸಗಾರನ ವಿರುದ್ಧ ದಾಖಲಾಗಿತ್ತು ಎಫ್‌ಐಆರ್‌:ಅಕ್ಟೋಬರ್ 28ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ಅಮಿತಾ ಜಿಂದಾಲ್, ನಟ ದರ್ಶನ್ ಮನೆಯ ಮುಂಭಾಗದ ರಸ್ತೆಯ ಖಾಲಿ ಜಾಗದಲ್ಲಿ ತಮ್ಮ ಕಾರ್ ನಿಲ್ಲಿಸಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ, ಸಮೀಪದಲ್ಲಿ ಮೂರು ನಾಯಿಗಳನ್ನು ಕಂಡ ಅಮಿತಾ ಅವರು, ''ತಾವು ಕಾರಿನ ಬಳಿ ಹೋಗಬೇಕು, ನಾಯಿಗಳನ್ನು ಕರೆದುಕೊಂಡು ಹೋಗಿ'' ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್ ಅವರ ಮನೆಯ ಕೆಲಸಗಾರ ಕಾರು ಪಾರ್ಕಿಂಗ್ ವಿಚಾರವಾಗಿ ಗಲಾಟೆ ಆರಂಭಿಸಿದ್ದರು. ಇಬ್ಬರ ನಡುವಿನ ವಾಗ್ವಾದದ ವೇಳೆ ನಾಯಿಯೊಂದು ಅಮಿತಾ ಮೇಲೆರಗಿತ್ತು. ನೆಲಕ್ಕೆ ಬಿದ್ದ ಅವರ ಮೇಲೆ ಮತ್ತೊಂದು ನಾಯಿ ಸಹ ಹೊಟ್ಟೆಯ ಭಾಗಕ್ಕೆ ಕಚ್ಚಿತ್ತು. ನಾಯಿಗಳು ಕಚ್ಚುತ್ತವೆ ಎಂದು ಗೊತ್ತಿದ್ದರೂ ಕೂಡ, ಅವುಗಳನ್ನು ನಿಯಂತ್ರಿಸದೇ ಕೆಲಸಗಾರ ಸುಮ್ಮನಿದ್ದನು ಎಂದು ಆರೋಪಿಸಿ ಆರ್.ಆರ್.ನಗರ ಠಾಣೆಗೆ ದೂರು ಕೊಟ್ಟಿದ್ದರು.

ಇದನ್ನೂ ಓದಿ:ಶಾಸಕರ ಬಾಮೈದನನ ಮನೆಯಲ್ಲಿ ಕಳ್ಳರ ಕೈಚಳಕ.. ವಜ್ರ, ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿ

Last Updated : Nov 7, 2023, 2:56 PM IST

ABOUT THE AUTHOR

...view details