ಕರ್ನಾಟಕ

karnataka

ETV Bharat / state

ಬಿಜೆಪಿ ರಾಜ್ಯ ಕಚೇರಿಗೆ ನಿರಾಣಿ ಭೇಟಿ: ಸಿಡಿ, ಪೆನ್​ಡ್ರೈವ್ ರಾಜಕೀಯ ಇಲ್ಲ ಎಂದ ನೂತನ ಸಚಿವ - Murugesh Nirani visits state BJP office

ಸಚಿವರಾದ ಬಳಿಕ ಮುರುಗೇಶ್ ನಿರಾಣಿ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನೂತನ ಸಚಿವರಿಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.

Bengaluru: Nirani's first visit to BJP state office after taking oath
ಪ್ರಮಾಣ ವಚನದ ಬಳಿಕ ಬಿಜೆಪಿ ರಾಜ್ಯ ಕಚೇರಿಗೆ ನಿರಾಣಿ ಮೊದಲ ಭೇಟಿ: ಸಿಡಿ, ಪೆನ್​ಡ್ರೈವ್ ರಾಜಕೀಯ ಇಲ್ಲ ಎಂದ ನೂತನ ಸಚಿವ

By

Published : Jan 15, 2021, 3:27 PM IST

ಬೆಂಗಳೂರು: ನೂತನ ಸಚಿವರಾದ ಬಳಿಕ ಮುರುಗೇಶ್ ನಿರಾಣಿ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಪ್ರಮಾಣ ವಚನದ ಬಳಿಕ ಬಿಜೆಪಿ ರಾಜ್ಯ ಕಚೇರಿಗೆ ನಿರಾಣಿ ಮೊದಲ ಭೇಟಿ: ಸಿಡಿ, ಪೆನ್​ಡ್ರೈವ್ ರಾಜಕೀಯ ಇಲ್ಲ ಎಂದ ನೂತನ ಸಚಿವ

ನೂತನ ಸಚಿವರಿಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಪತ್ರಕರ್ತರ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಿದರು. ರವಿವಾರ 17 ರಂದು ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ವಿವಿಧ ಕಾರ್ಖಾನೆಗಳ ಭೂಮಿ ಪೂಜೆಗೆ ಬರುತ್ತಿದ್ದಾರೆ. ಎಥೆನಾಲ್ ಘಟಕಕ್ಕೆ ಭೂಮಿ ಪೂಜೆ, ಶಾಲೆ, ಬ್ಯಾಂಕು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದು ಅಮಿತ್ ಶಾ ಭೇಟಿ ಬಗ್ಗೆ ವಿವರಣೆ ನೀಡಿದರು.

ದೇಶ, ರಾಜ್ಯದಲ್ಲಿ ಮಾಡಲು ಹಲವು ಕೆಲಸಗಳಿವೆ. ಆದರೆ, ಮಾಧ್ಯಮಗಳಲ್ಲಿ ಸಿಡಿ, ಪೆನ್​ಡ್ರೈವ್ ಬಗ್ಗೆ ಬಿತ್ತರಿಸಲಾಗುತ್ತಿದೆ. ಆ ರೀತಿ ಯಾವುದೇ ವಿಷಯ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸಾಮಾನ್ಯ ಕಾರ್ಯಕರ್ತ, ಕೈಗಾರಿಕಾ ಸಚಿವನಾಗಿ ಕೆಲಸ ಮಾಡಿರುವ ನಾನು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.

ಇನ್ನೂ ದೊಡ್ಡವರ ಬಗ್ಗೆ ಕಾಮೆಂಟ್ ಮಾಡೊದಿಲ್ಲ ಎನ್ನುವ ಮೂಲಕ ಯತ್ನಾಳ್ ಹೇಳಿಕೆಗೆ ನಿರಾಣಿ ಪರೋಕ್ಷ ಟಾಂಗ್ ನೀಡಿದರು. ಸಿಡಿ ವಿಷಯ 100ಕ್ಕೆ ನೂರು ಸುಳ್ಳು ಎಂದು ಒತ್ತಿ ಹೇಳಿದರು.

ಆಲಂ ಪಾಷಾ ಆರೋಪ ವಿಚಾರ ಪ್ರಶ್ನೆಗೆ ನಿರಾಣಿ ಉತ್ತರಿಸುತ್ತಾ, ನಾನು ಕೈಗಾರಿಕಾ ಸಚಿವನಾಗಿದ್ದಾಗ ಹಲವರಿಗೆ ಭೂಮಿ ಅಲಾಟ್ ಮಾಡಲಾಗಿದೆ. ಭೂಮಿ ನೀಡಿದವರಿಗೆ ಹಣ ಕಟ್ಟಲು ನೋಟೀಸ್ ನೀಡಲಾಗುತ್ತೆ ಎಂದರು.

ABOUT THE AUTHOR

...view details