ಕರ್ನಾಟಕ

karnataka

ETV Bharat / state

ಮೇಯರ್ ದಿಢೀರ್ ಪರಿಶೀಲನೆ- ಹಾಜರಾತಿ ಹಾಕದ ಅಧಿಕಾರಿಗಳ ಸಂಬಳ ಕಟ್ ಮಾಡಲು ಸೂಚನೆ

ಬೆಂಗಳೂರು ನೂತನ ಮೇಯರ್​ ಗೌತಮ್ ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್ ನಗರ ಪಾಲಿಕೆಯ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಚೇರಿಗಳಲ್ಲಿ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಹಾಜರಾತಿ ಹಾಕದ ಅಧಿಕಾರಿಗಳ ಸಂಬಳ ಕಟ್ ಮಾಡಲು ಆದೇಶ ನೀಡಿದರು.

ಮೇಯರ್ ದಿಢೀರ್ ಪರಿಶೀಲನೆ

By

Published : Oct 16, 2019, 9:57 PM IST

ಬೆಂಗಳೂರು: ಮೇಯರ್ ಗೌತಮ್ ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್ ಇಂದು ಪಾಲಿಕೆ ಕಚೇರಿಗಳಿಗೆ ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು‌.

ಮೊದಲು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಆವರಣದಲ್ಲಿರುವ ಕಂದಾಯ ಅಧಿಕಾರಿ ಹಾಗೂ ಮಾರುಕಟ್ಟೆ ಕಚೇರಿಗೆ ತೆರಳಿ ಹಾಜರಾತಿ ಪುಸ್ತಕ ಪರಿಶೀಲಿಸಿದರು‌. ಬಳಿಕ ಬೃಹತ್ ನೀರುಗಾಲುವೆ ವಿಭಾಗದ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲಿಸಿ ಹಾಜರಾತಿ ಹಾಕದಿರುವುದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದರು. ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರ ಪ್ರಹ್ಲಾದ್, ಅಕ್ಟೋಬರ್ ತಿಂಗಳಲ್ಲಿ ಒಂದು ದಿನವೂ ಹಾಜರಾತಿ ಹಾಕಿಲ್ಲ. ಆ ಒಂದು ತಿಂಗಳ ವೇತನ ಕಡಿತ ಮಾಡುವಂತೆ ಮೇಯರ್ ಸೂಚಿಸಿದರು. ಅಲ್ಲದೇ ಮೂವ್ ಮೆಂಟ್ ರಿಜಿಸ್ಟರ್ ನಲ್ಲಿ ಸಹಿ ಹಾಕದ ಅಧಿಕಾರಿಗಳಿಗೆ ಒಂದು ವಾರ ಸಂಬಳ ಕಡಿತಕ್ಕೆ ಆದೇಶಿಸಿದರು. ಕಚೇರಿ ಅವಧಿಯಲ್ಲಿ ಬಿಬಿಎಂಪಿ ಗುರುತಿನ ಚೀಟಿ ಹಾಕದ ಸಿಬ್ಬಂದಿಯನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.

ಮೇಯರ್ ದಿಢೀರ್ ಪರಿಶೀಲನೆ

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹೊಸ ಕಟ್ಟಡ ನಿರ್ಮಾಣದ ಬಳಿ ದುರಸ್ತಿ ಕಾರ್ಯ ಸರಿಯಾಗಿ ಮಾಡದೇ ಇರುವುದು ಹಾಗೂ ಕಾಂಪ್ಲೆಕ್ಸ್ ಮುಂಭಾಗ ಕಸ ಬಿದ್ದಿರುವುದನ್ನು ಕಂಡು ಸ್ಥಳದಲ್ಲೇ ಅಧಿಕಾರಿಗೆ ಫೋ‌ನ್ ಮಾಡಿ ತರಾಟೆಗೆ ತೆಗೆದುಕೊಂಡ ಮೇಯರ್. ವ್ಯಾಪಾರಿಗಳು ಸ್ವಚ್ಛತೆ ಕಾಪಾಡದೇ ಇದ್ದರೆ ಅಂಗಡಿಯವರಿಗೆ ದಂಡ ವಿಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊಸ ಕಾಂಪ್ಲೆಕ್ಸ್​ನ ಪಾರ್ಕಿಂಗ್ ಜಾಗದಲ್ಲಿ ತಾತ್ಕಾಲಿಕವಾಗಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಉದ್ದಿಮೆ ಪರವಾನಗಿ ಕೊಟ್ಟಿಲ್ಲ. ಆದರೂ ವ್ಯಾಪಾರ ನಡೆಸಲು ಅನುಮತಿ ಕೊಟ್ಟವರು ಯಾರು ಎಂದು ಅಧಿಕಾರಿಯನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಇಲ್ಲಿ ನಿರ್ಮಿಸಿರುವ ಎಲ್ಲ ಮಳಿಗೆಗಳ ಶಟರ್ ಕೂಡಲೆ ಮುಚ್ಚಬೇಕು. ಮುಚ್ಚುವುದು ಮಾತ್ರವಲ್ದೇ ಬೀಗ ಮುದ್ರೆ ಜಡಿಯಬೇಕು. ಅನಧಿಕೃತ ಮಳಿಗೆಗಳನ್ನೆಲ್ಲ ಕೂಡಲೆ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾಂಪ್ಲೆಕ್ಸ್ ನಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಲಿಪ್ಟ್ ವ್ಯವಸ್ಥೆಯನ್ನು ಕೂಡಲೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ABOUT THE AUTHOR

...view details