ಬೆಂಗಳೂರು :ಇಂಟರ್‌ಲಾಕಿಂಗ್ ಹಾಗೂ ಪುನರ್ ನಿರ್ಮಾಣ ಕಾಮಗಾರಿ ಹಿನ್ನೆೆಲೆ ಡಿಸೆಂಬರ್ 14 ರಿಂದ 22 ರವರೆಗೆ ಬೆಂಗಳೂರು ಮತ್ತು ಮಂಗಳೂರಿನ ನಡುವಿನ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆೆ ಇಲಾಖೆ ಮಾಹಿತಿ ನೀಡಿದೆ.
ನೈರುತ್ಯ ರೈಲ್ವೆೆ ಇಲಾಖೆ ಅಧಿಕಾರಿಗಳು ಈ ಕುರಿತು ಪ್ರಕಟಣೆ ನೀಡಿದ್ದು, ಹಾಸನ ಜಂಕ್ಷನ್ ರೈಲ್ವೆೆ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣಕ್ಕೆೆ ಅನುಕೂಲವಾಗಲು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಡಿ. 14 ರಿಂದ 18 ರವರೆಗೆ ಪೂರ್ವ ಇಂಟರ್‌ಲಾಕಿಂಗ್ ಮತ್ತು ಡಿಸೆಂಬರ್ 19 ರಿಂದ 22 ರವರೆಗೆ ಪುನರ್‌ನಿರ್ಮಾಣ ಕಾಮಗಾರಿಗಾಗಿ ಹಾಸನ ಯಾರ್ಡ್‌ನಲ್ಲಿ ನಾನ್-ಇಂಟರ್‌ಲಾಕಿಂಗ್‌ಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ಸ್ಟ್ಯಾಂಡರ್ಡ್ ಇಂಟರ್‌ಲಾಕಿಂಗ್‌ನ್ನು ನವೀಕರಿಸಲಾಗುತ್ತಿದ್ದು, ಇದರಿಂದ ನೈರುತ್ಯ ರೈಲ್ವೆೆಯು ಅರಸೀಕೆರೆ, ನೆಲಮಂಗಲ, ಮೈಸೂರು ಮತ್ತು ಮಂಗಳೂರುಗಳಲ್ಲಿ ರೈಲುಗಳನ್ನು ಸಮರ್ಥವಾಗಿ ಸಂಚಾರ ನಡೆಸಲು ಸಹಾಯಕವಾಗಲಿದೆ. ಈ ಕಾಮಗಾರಿಯು ಡಿಸೆಂಬರ್ 14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರಸಂಪರ್ಕ ಬ್ಲಾಕ್ ಜಾರಿಯಾಗುವುದರಿಂದ ಈ ಸಮಯದಲ್ಲಿ ರೈಲು ಕಾರ್ಯಾಚರಣೆ ಇರವುದಿಲ್ಲ ಎಂದು ಹೇಳಿದೆ.
ರದ್ದುಗೊಂಡ ರೈಲು ಸೇವೆಗಳ ವಿವರ :
- ಬೆಂಗಳೂರು - ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್‌ಸ್ ಪ್ರೆೆಸ್ (ರಾತ್ರಿಯ ಸೇವೆಗಳು) ಡಿ.16 ರಿಂದ 20 ರವರೆಗೆ ರದ್ದು.
- ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್‌ಸ್ ಪ್ರೆೆಸ್(ರಾತ್ರಿಯ ಸೇವೆಗಳು) - ಡಿ.16 ರಿಂದ 20 ರವರೆಗೆ ರದ್ದು.
- ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆೆಸ್- ಡಿ.14, 17, 19 ಮತ್ತು 21 ರಂದು ರದ್ದು.
- ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆೆಸ್ - ಡಿ.13, 15, 18, 20 ಮತ್ತು 22 ರಂದು ರದ್ದು.
- ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆೆಸ್ (ರೈಲು ಸಂಖ್ಯೆೆ. 16539) - ಡಿ.16 ರಂದು ರದ್ದು.
- ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆೆಸ್(ರೈಲು ಸಂಖ್ಯೆೆ 16540) - ಡಿ.17 ರಂದು ರದ್ದು.
ಪರ್ಯಾಯ ಸೇವೆ :ನೈರುತ್ಯ ರೈಲ್ವೆೆಯು ಈ ಅವಧಿಯಲ್ಲಿ ಬೆಂಗಳೂರು - ಮಂಗಳೂರು ಸಂಪರ್ಕಿಸುವ ಏಕೈಕ ರೈಲು ಸೇವೆ ರೈಲು ಸಂಖ್ಯೆೆ 16585/16586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಬೆಂಗಳೂರು-ಮುರುಡೇಶ್ವರ. ಆದರೆ, ಇದು ಮೈಸೂರು ಮೂಲಕ ಹಾದುಹೋಗುವುದಿಲ್ಲ.
- ಡಿ.14 ರಿಂದ 16 ರವರೆಗೆ, ರೈಲು ಯಶವಂತಪುರ ಬೈಪಾಸ, ನೆಲಮಂಗಲ, ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಮೂಲಕ ಚಲಿಸುತ್ತದೆ.
- ಡಿ.17 ರಿಂದ 22 ರವರೆಗೆ ಮೈಸೂರು ಮಾರ್ಗ ಹೊರತುಪಡಿಸಿ ಯಶವಂತಪುರ ಬೈಪಾಸ್, ತುಮಕೂರು, ಅರಸೀಕೆರೆ ಮತ್ತು ಹಾಸನ ಮೂಲಕ ರೈಲು ಸಂಚಾರ ನಡೆಸಲಿದೆ.
ಇದನ್ನೂ ಓದಿ :ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು ವ್ಯವಸ್ಥೆ