ಕರ್ನಾಟಕ

karnataka

ETV Bharat / state

ಕೆಳಮನೆ 'ಪತ್ನಿ' ಮೇಲ್ಮನೆ 'ಗಂಡ'ಪರಾರಿ ಪ್ರಕರಣ: ವಕೀಲರ ಮೂಲಕ ಪೊಲೀಸರ ಮುಂದೆ ಹಾಜರಾದ ಮೇಲ್ಮನೆ ಗಂಡ - ಈಟಿವಿ ಭಾರತ ಕನ್ನಡ

ಕೆಳ ಮನೆ 'ಪತ್ನಿ' ಮೇಲ್ಮನೆ 'ಗಂಡ' ಪರಾರಿ ಪ್ರಕರಣ - ನಾಪತ್ತೆಯಾಗಿದ್ದ ವ್ಯಕ್ತಿ ವಕೀಲರೊಂದಿಗೆ ಪೊಲೀಸ್​ ಠಾಣೆಗೆ ಹಾಜರು - ಮಹಿಳೆ ಪರಾರಿ ಬಗ್ಗೆ ಗೊತ್ತಿಲ್ಲ ಎಂದ ಆರೋಪಿ

Etv Bharatbengaluru-man-and-women-eloped-case-accused-came-to-police-station
Etv ಕೆಳಮನೆ 'ಪತ್ನಿ' ಮೇಲ್ಮನೆ 'ಗಂಡ'ಪರಾರಿ ಪ್ರಕರಣ: ವಕೀಲರ ಮೂಲಕ ಪೊಲೀಸರ ಮಂದೆ ಹಾಜರಾದ ಮೇಲ್ಮನೆ ಗಂಡ

By

Published : Feb 1, 2023, 9:31 AM IST

Updated : Feb 1, 2023, 11:01 AM IST

ಬೆಂಗಳೂರು : ಕೆಳ ಮನೆ 'ಪತ್ನಿ' ಮೇಲ್ಮನೆ 'ಗಂಡ' ಪರಾರಿ ಪ್ರಕರಣ ಸಂಬಂಧ ನಿನ್ನೆ ತಡರಾತ್ರಿ ವಕೀಲರ ಜೊತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಪರಾರಿಯಾಗಿದ್ದ ನವೀದ್ ಹಾಜರಾಗಿದ್ದಾನೆ‌. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರದ ಒಂದೇ ಕಟ್ಟಡದಲ್ಲಿ ನವೀದ್ ಕುಟುಂಬ ಹಾಗೂ ಮುಬಾರಕ್ ಕುಟುಂಬ ವಾಸವಾಗಿತ್ತು. ಮೊದಲ ಮಹಡಿಯಲ್ಲಿ ಮುಬಾರಕ್ ಹಾಗೂ ಶಾಜಿಯಾ ದಂಪತಿ ಹಾಗೂ ಎರಡನೇ ಮಹಡಿಯಲ್ಲಿ ನವೀದ್ ಹಾಗೂ ಝೀನತ್ ದಂಪತಿ ವಾಸವಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ‌ ನವೀದ್ ಹಾಗೂ ಕೆಳಮಹಡಿಯಲ್ಲಿ ವಾಸವಾಗಿದ್ದ ಶಾಜಿಯಾ ನಾಪತ್ತೆಯಾಗಿದ್ದರು. ಈ ಸಂಬಂಧ ಮುಬಾರಕ್ ಹಾಗು ಝೀನತ್ ಎಂಬುವರು ಪ್ರತ್ಯೇಕ ದೂರು ನೀಡಿದ್ದರು.

ವಕೀಲರೊಂದಿಗೆ ಪೊಲೀಸ್​​ ಠಾಣೆಗೆ ಹಾಜರಾದ ನವೀದ್: ನವೀದ್ ತಾನು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಸ್ಯಾಂಟ್ರೋ ಕಾರಿನಲ್ಲಿ ತೆರಳಿದ್ದ. ಬಳಿಕ ನವೀದ್​ ನಾಪತ್ತೆಯಾಗಿದ್ದ. ಈ ಬಗೆ ನವೀದ್ ಹೆಂಡತಿ ಪ್ರಕರಣ ದಾಖಲಿಸಿದ್ದರು. ಸದ್ಯ ನಾಪತ್ತೆಯಾಗಿದ್ದ ನವೀದ್ ಈಗ ತಮ್ಮ ವಕೀಲರ ಜೊತೆ ಪೊಲೀಸ್ ಠಾಣೆಗೆ ಬಂದಿದ್ದಾನೆ.

ನಾನು ಶಾಜಿಯಾಳನ್ನು ಕರೆದುಕೊಂಡು ಹೋಗಿಲ್ಲ: ಕೆಳ ಮಹಡಿಯಲ್ಲಿ ವಾಸವಿದ್ದ ಶಾಜಿಯಾಳನ್ನು ನಾನು ಕರೆದುಕೊಂಡು ಹೋಗಿಲ್ಲ. ನನ್ನ ಕೆಲಸದ ನಿಮಿತ್ತ ನಾನು ಚೆನ್ನೈಗೆ ಹೋಗಿದ್ದೆ ಎಂದು ನವೀದ್​ ಹೇಳಿದ್ದಾನೆ. ನವೀದ್​ ಪತ್ನಿ ಝೀನತ್ ಪೊಲೀಸರ‌ ಮೇಲೆ ಆರೋಪಿಸಿದ್ದು 'ನನ್ನ ಗಂಡ ಕಾಣೆಯಾಗಿದ್ದಾನೆಂದು ನಾನು ದೂರು ಕೊಟ್ಟಿದ್ದೆ. ನನ್ನ ಗಂಡನನ್ನ ಕರೆದುಕೊಂಡು ಬಂದಿರುವ ಪೊಲೀಸರು ನನ್ನ ಜೊತೆ ಕಳಿಸದೇ ವಕೀಲರೊಟ್ಟಿಗೆ ಕಳಿಸಿದ್ದಾರೆಂದು ಆರೋಪಿಸಿದ್ದಾರೆ.

ಇನ್ನೂ ನವೀದ್ ಪೊಲೀಸ್ ಠಾಣೆಗೆ ಹಾಜರಾಗುತ್ತಿದ್ದಂತೆ ಶಾಜಿಯಾ ತನ್ನ ಪತಿ ಮುಬಾರಕ್​ಗೆ ವಕೀಲರ ಮೂಲಕ ವಿಚ್ಛೇದನ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ವಿಚ್ಛೇದನ ಪತ್ರ ಕಳುಹಿಸಿರುವ ಹಿನ್ನೆಲೆ ನವೀದ್ ಮತ್ತು ಶಾಜಿಯಾ ಒಟ್ಟಿಗೆ ಇರುವುದರ ಬಗ್ಗೆ ಎರಡು ಮನೆ ಕುಟುಂಬಸ್ಥರಿಗೆ ಅನುಮಾನ ಮೂಡಿದೆ. ಈ ಸಂಬಂಧ ಸಂಬಂಧಿಕರು ಹಲ್ಲೆ ನಡೆಸುತ್ತಾರೆ ಎಂಬ ಕಾರಣಕ್ಕೆ ವಕೀಲನ ಜೊತೆ ಬಂದಿದ್ದ ನವೀದ್ ತನ್ನ ಪತ್ನಿಯನ್ನೂ ಸರಿಯಾಗಿ ಭೇಟಿಯಾಗದೇ ತನ್ನ ವಕೀಲರ ಜೊತೆ ತೆರಳಿದ್ದಾನೆ. ಸದ್ಯ ಜ್ಞಾನಭಾರತಿ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರುವ ಹಿನ್ನೆಲೆ ಸಹಿ ಹಾಕಿಸಿ ವಾಪಸ್​​ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಳಮನೆಯ ಮಹಿಳೆ, ಮೇಲಿನ ಮನೆಯ ಪುರುಷ:ಮಾರುತಿ ನಗರದ ಒಂದೇ ಕಟ್ಟಡದಲ್ಲಿ ವಾಸವಿದ್ದ ಎರಡು ಕುಟುಂಬ ಪರಸ್ಪರ ಪರಿಚಯಸ್ಥರಾಗಿದ್ದರು. ಇಬ್ಬರೂ ಒಂದೇ ದಿನ ನಾಪತ್ತೆಯಾಗಿರುವುದು ಎರಡು ಕುಟುಂಬಸ್ಥರಲ್ಲಿ ಅನುಮಾನ ಉಂಟು ಮಾಡಿತ್ತು. 'ಡಿಸೆಂಬರ್ 9ರಂದು ಬೆಳಗ್ಗೆ ಕಾರಿನಲ್ಲಿ ಹೋದ ನನ್ನ ಗಂಡ ವಾಪಸ್ ಮನೆಗೆ ಬಂದಿಲ್ಲ. ನನ್ನ ಗಂಡ ನಾಪತ್ತೆಯಾದ ದಿನವೇ ಕೆಳಮನೆಯ ವ್ಯಕ್ತಿಯ ಪತ್ನಿ ಕೂಡ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ನಾಪತ್ತೆಯಾದ ಮಹಿಳೆಯ ಗಂಡನೂ ಹೇಳಿದ್ದಾನೆ. ಆಕೆಯ ಜೊತೆ ನನ್ನ ಗಂಡ ಹೋಗಿರುವ ಗುಮಾನಿ ಇದ್ದು, ಅವರನ್ನು ಹುಡುಕಿ ಕೊಡಿ' ಎಂದು ನಾಪತ್ತೆಯಾಗಿದ್ದ ವ್ಯಕ್ತಿಯ ಪತ್ನಿ ದೂರಿನಲ್ಲಿ ತಿಳಿಸಿದ್ದರು.

'ನನ್ನ ಹೆಂಡತಿಗೆ ಡಿಸೆಂಬರ್ 9 ರಂದು ಬೆಳಿಗ್ಗೆ ಕರೆ ಮಾಡಿದಾಗ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿರುವುದಾಗಿ ತಿಳಿಸಿದ್ದಳು.ಮತ್ತೆ 10 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಗೆ ಬಂದಾಗ ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಲಾಗಿತ್ತು. ಬಳಿಕ ಸಂಬಂಧಿಕರು ಮತ್ತು ಸ್ನೇಹಿತರನ್ನು ಕೇಳಿದರೂ ಎಲ್ಲೂ ಪತ್ತೆಯಾಗಿಲ್ಲ. ನನ್ನ 2.5 ವರ್ಷದ ಮಗಳನ್ನು ಕೂಡ ಕರೆದುಕೊಂಡು ಹೋಗಿದ್ದಾಳೆ. ಹೆಂಡ್ತಿ ಮತ್ತು ಮಗುವನ್ನು ಹುಡುಕಿ ಕೊಡಿ' ಮಹಿಳೆಯ ಪತಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ :ಬೆಂಗಳೂರಲ್ಲಿ ಕೆಳಮನೆ ಮಹಿಳೆ, ಮೇಲ್ಮನೆ ವ್ಯಕ್ತಿ ನಾಪತ್ತೆ: ಅವರ ಗಂಡ, ಇವರ ಪತ್ನಿಯಿಂದ ಪ್ರತ್ಯೇಕ ದೂರು

Last Updated : Feb 1, 2023, 11:01 AM IST

ABOUT THE AUTHOR

...view details