ಬೆಂಗಳೂರು: ರಾಜ್ಯದಲ್ಲಿ ಮೊದಲ ಅಲೆಯಲ್ಲಿ ಕಾಡಿದ ವೈದ್ಯಕೀಯ ಚಿಕಿತ್ಸೆ ಸಮಸ್ಯೆ ಇದೀಗ ಕೋವಿಡ್ 2ನೇ ಅಲೆಯಲ್ಲೂ ಮುಂದುವರೆದಿದೆ. ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಕೋವಿಡ್ ರೋಗಿಗೆ ಚಿಕಿತ್ಸೆ ಸಿಗದೆ ಪರದಾಡಿದ ಘಟನೆ ನಡೆದಿದೆ. 58 ವರ್ಷ ಸೋಂಕಿತ ಮಹಿಳೆಯನ್ನು ಮಲ್ಯ ಆಸ್ಪತ್ರೆಯವರು ಹೊರ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೋವಿಡ್ ದೃಢಪಡುತ್ತಿದ್ದಂತೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ: ಫುಟ್ಪಾತ್ನಲ್ಲೇ ಸಮಯ ಕಳೆದ ಸೋಂಕಿತೆ! - ಬೆಂಗಳೂರು
58 ವರ್ಷದ ಸೋಂಕಿತ ಮಹಿಳೆಯನ್ನ ಮಲ್ಯ ಆಸ್ಪತ್ರೆಯವರು ಹೊರ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸೋಂಕಿತ ಮಹಿಳೆ ಮಲ್ಯ ಆಸ್ಪತ್ರೆಯಲ್ಲಿ ವಾರಕ್ಕೆರಡು ಬಾರಿ ಬಂದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಭಾನುವಾರ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ (ಸೋಮವಾರ) ಮಹಿಳೆಗೆ ಸೋಂಕು ದೃಢಪಟ್ಟಿದೆ. ಇಂದು ಡಯಾಲಿಸಿಸ್ಗಾಗಿ ಬಂದವರನ್ನ ಆಸ್ಪತ್ರೆಗೆ ಸೇರಿಸಿಕೊಳ್ಳದೆ ನಮ್ಮದು ನಾನ್ ಕೋವಿಡ್ ಆಸ್ಪತ್ರೆ ಎಂದು ಹೇಳಿ ಹೊರಗೆ ಕಳಿಸಿದ್ದಾರೆ ಎನ್ನಲಾಗ್ತಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ನೀಡದೆ, ಡಯಾಲಿಸಿಸ್ ಕೂಡ ಮಾಡದೆ ಇರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಊಟ- ನೀರು ಇಲ್ಲದೆ ಒಂಟಿಯಾಗಿ ಆಸ್ಪತ್ರೆಗೆ ಬಂದಿದ್ದ ಸೋಂಕಿತ ಮಹಿಳೆ ಫುಟ್ಪಾತ್ ಮೇಲೆ ನರಳಾಡುತ್ತಿದ್ದರು.