ಕರ್ನಾಟಕ

karnataka

ETV Bharat / state

ಲಾಕ್​​ಡೌನ್​ಗೆ​ ಕ್ಯಾರೆ ಅನ್ನದ ಬೆಂಗಳೂರಿಗರು: ಅಗತ್ಯ ಸೇವೆಗಳ ನೆಪವೊಡ್ಡಿ ಓಡಾಟ

ಲಾಕ್​​ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದನ್ನೇ ನೆಪ ಮಾಡಿಕೊಂಡಿರುವ ಸಿಲಿಕಾನ್ ಸಿಟಿಯ ಬಹುತೇಕ ಜನ ಎಂದಿನಂತೆ ರಸ್ತೆಗಿಳಿದಿದ್ದಾರೆ.

Bengaluru Lockdown Update
ಬೆಂಗಳೂರು ಕೋವಿಡ್​ ಲಾಕ್ ಡೌನ್

By

Published : Jul 17, 2020, 12:02 PM IST

ಬೆಂಗಳೂರು:ಕೊರೊನಾ ನಿಯಂತ್ರಣಕ್ಕೆ ಒಂದು ವಾರ ಕಠಿಣ ಲಾಕ್​​ಡೌನ್ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಲಾಕ್​ಡೌನ್​ಅನ್ನ ಜನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಲಾಕ್​​ಡೌನ್ ಇದ್ದರೂ ನಗರದ ಪ್ರಮುಖ ಪ್ರದೇಶಗಳಾದ ಯಶವಂತಪುರ, ಮಲ್ಲೇಶ್ವರಂ, ಜೆ.ಪಿ.ನಗರ, ಜಯನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದೆ. ಮುಂಜಾನೆ ಪೊಲೀಸರು ಇರಲ್ಲ ಎಂಬ ಕಾರಣಕ್ಕೆ ನಿಯಮ ಲೆಕ್ಕಿಸದೆ ಜನ ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.

ಲಾಕ್​​ಡೌನ್​ಗೆ ಕ್ಯಾರೆ ಅನ್ನದ ಬೆಂಗಳೂರಿಗರು

ಅಗತ್ಯ ಸೇವೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದನ್ನೇ ನೆಪ ಮಾಡಿಕೊಂಡಿರುವ ಬಹುತೇಕ ಜನ ಎಂದಿನಂತೆ ರಸ್ತೆಗಿಳಿದಿದ್ದಾರೆ.

ABOUT THE AUTHOR

...view details