ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿಗೆ ಕೆಲ ನಿಯಮಗಳನ್ನ ವಾಕಿಟಾಕಿ ಮೂಲಕ ತಿಳಿಸಿದ್ದಾರೆ. ಇನ್ನು ಲಾಕ್ಡೌನ್ ಮುಂದಿನ 22ನೇ ತಾರೀಕು ಮುಂಜಾನೆ 5ಗಂಟೆಯವರೆಗೆ ಇರಲಿದೆ. ಎಲ್ಲ ಸಿಬ್ಬಂದಿಗೆ ಲಾಕ್ಡೌನ್ ಕೆಲಸದ ಬಗ್ಗೆ ಅರಿವು ಇದೆ. ಆದರೂ ಮತ್ತೆ ಈ ಕುರಿತು ಗಮನ ಕೊಟ್ಟು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಜಾರಿ ಹಿನ್ನೆಲೆ: ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್ ಆಯುಕ್ತ
ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಲಾಕ್ಡೌನ್ ಜಾರಿಯಾಗಿದೆ. ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ.
ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್ ಆಯುಕ್ತ
ಆಯುಕ್ತರು ಸೂಚಿಸಿರುವ ಏಳು ನಿಯಮಗಳು:
- ಲಾಕ್ಡೌನ್ ಸಮಯದಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೆ ಸದ್ಯ ಕೆಲವೊಂದು ಬ್ಯುಸಿನೆಸ್ ಓಪನ್ ಇರುತ್ತದೆ. ಹೀಗಾಗಿ ಸಿಬ್ಬಂದಿ ಸೂಕ್ಷ್ಮವಾಗಿ ನೋಡಿ ಜನರನ್ನ ಬಿಡಬೇಕು.
- ಏಳು ದಿನ ಮಾತ್ರ ಲಾಕ್ಡೌನ್ ಇರುವ ಕಾರಣ ಐಡಿ ಆಧಾರದ ಮೇಲೆ ಜನರನ್ನ ಬಿಡಬೇಕು. ಸಿಬ್ಬಂದಿ ಅಲರ್ಟ್ ಆಗಿರಬೇಕೆಂದು ಸೂಚಿಸಿದ್ದಾರೆ.
- ಸರ್ಕಾರ 5ಗಂಟೆಯಿಂದ 12ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಿದೆ. 12ಗಂಟೆಯ ನಂತರರ ಮೆಡಿಕಲ್ ಶಾಪ್ ಓಪನ್ ಇರುತ್ತವೆ. 12 ಗಂಟೆ ಮೇಲೆ ಇದರ ಬಗ್ಗೆ ನಿಗಾ ಇಟ್ಟು ಸಿಬ್ಬಂದಿ ಅವಾಚ್ಯ ಶಬ್ದ ಬಳಕೆ ಮಾಡದೇ ಅಂಗಡಿ ಮುಂಗಟ್ಟು ಬಂದ್ ಮಾಡಿಸಬೇಕು.
- ಮುಂಜಾನೆ ನ್ಯೂಸ್ ಪೇಪರ್, ಮೀಡಿಯಾದವರ ಓಡಾಟ ಇರುತ್ತದೆ. ಈ ವೇಳೆ, ಐಡಿ ತೋರಿಸಿದರೆ ಸಾಕು. ಹಾಗೆ ಕಾರ್ಡ್ ಇಲ್ಲದೇ ಇರುವ ಮಾಂಸ ಮಾರಾಟ, ತರಕಾರಿ ಮಾರಾಟ ಮಾಡುವವರನ್ನ ಗಮನಿಸಿ ಬಿಡಬೇಕು
- ವಿನಾಕಾರಣ ತಿರುಗುವವರ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳಿ.
- ರಸ್ತೆಯ ಬಳಿ ಬ್ಯಾರಿಕೇಡ್ ಹಾಕಿದ್ದು, ಅಲ್ಲಿ ಇರುವ ಹೆಡ್ ಕಾನ್ಸ್ಟೇೆಬಲ್ ಅವರೇ ಕಮಿಷನರ್. ಎಲ್ಲವನ್ನ ಸೂಕ್ಷವಾಗಿ ಪರಿಗಣಿಸಬೇಕು. ಕೆಳಹಂತದ ಸಿಬ್ಬಂದಿ ಮೇಲೆ ಬಹಳ ನಂಬಿಕೆ ಇದೆ ಎಂದಿದ್ದಾರೆ.
- ಕೊರೊನಾ ಸೋಂಕು ಸಿಬ್ಬಂದಿಗೆ ಬಂದಿರುವ ಕಾರಣ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಮೊದಲನೇ ಬಾರಿಗೆ ಹಲವು ಸ್ವಯಂ ಸೇವಕರನ್ನು ಆನ್ಲೈನ್ ಮೂಲಕ ನೇಮಕ ಮಾಡಿದ್ದು, ಇವರು ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆೆ.
ನೈಟ್ ರೌಂಡ್ಸ್, ಠಾಣೆಗೆ ಬರುವ ಜನರ ಕಷ್ಟ ವಿಚಾರಣೆ, ಬ್ಯಾರಿಕೇಡ್ ಬಳಿ ಬಂದೋಬಸ್ತ್, ಪೊಲೀಸ್ ಠಾಣೆ ಬರವಣಿಗೆ ಸ್ಟೇಟ್ಮೆಂಟ್ ,ಬಂದೋಬಸ್ತ್ಗೆ ತೆರಳುವಾಗ ಕಡ್ಡಾಯ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಆಯುಕ್ತರು ಸೂಚಿಸಿದ್ದಾರೆ.