ಬೆಂಗಳೂರು : ತುಳು ಕೂಟದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಕಂಬಳ ನೋಡಲು ಕರಾವಳಿ ಮೂಲದ ಸಿನಿಮಾ ನಟ, ನಟಿಯರು ಬಂದಿದ್ದರು. ನಟರಾದ ಪೂಜಾ ಹೆಗಡೆ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಉಪೇಂದ್ರ ಸೇರಿದಂತೆ ಹಲವರು ಕಂಬಳ ಕಣ್ತುಂಬಿಕೊಂಡರು.
ನಟ ರಮೇಶ್ ಅರವಿಂದ್ ಮಾತನಾಡಿ, "ನಮ್ಮತನ ಎನ್ನುವುದು ನಮ್ಮ ಕಲೆ, ಕ್ರೀಡೆ, ಸಂಸ್ಕೃತಿಗಳಲ್ಲಿ ಅಡಗಿದೆ. ಕ್ರಿಕೆಟ್‌ನಂತೆ ನಮ್ಮ ಸಾಂಪ್ರದಾಯಿಕ ಕಂಬಳವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ" ಎಂದರು.
"ಕರಾವಳಿ ಕಂಬಳವನ್ನು ನಾನು ಸಾಮಾನ್ಯವಾಗಿ ನೋಡುತ್ತೇನೆ. ಆದರೆ, ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿರುವುದು ತುಂಬಾ ಖುಷಿಯಾಗಿದೆ" ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ನಟ ಉಪೇಂದ್ರ ಮಾತನಾಡುತ್ತಾ, "ಕರಾವಳಿ ಭಾಗದ ಸ್ನೇಹಿತರು ತುಂಬಾ ಜನ ಸಿನಿಮಾರಂಗದಲ್ಲೇ ಪರಿಚಯವಾಗಿದ್ದರು. ಹಾಗೆಯೇ ಕರಾವಳಿಯ ಕಂಬಳ ಬೆಂಗಳೂರಲ್ಲಿ ಆಯೋಜನೆ ಮಾಡಿದ್ದರಿಂದ ಎಲ್ಲರನ್ನೂ ಒಟ್ಟಿಗೆ ನೋಡಿ ಖುಷಿಯಾಯಿತು" ಎಂದು ತಿಳಿಸಿದರು.
"ಕಂಬಳ ಎನ್ನುವುದು ನಮ್ಮ ಹೆಮ್ಮೆ. ಇದು ನಮ್ಮ ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತನ್ನು ಮುಟ್ಟಬೇಕು. ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿ" ಎನ್ನುವುದು ನಟಿ ಪೂಜಾ ಹೆಗಡೆ ಮಾತು.
ಇದನ್ನೂ ಓದಿ:ಕಂಬಳ ಸ್ಪರ್ಧೆಗಾಗಿ ಕೋಣಗಳು, ಜಾಕಿಗೆ ಪೂರ್ವದ ತಾಲೀಮು ಹೇಗಿರುತ್ತದೆ ? ಇಲ್ಲಿದೆ ಮಾಹಿತಿ
ಫೈನಲ್ ಫಲಿತಾಂಶ:ಬೆಂಗಳೂರು "ರಾಜ - ಮಹಾರಾಜ" ಜೋಡುಕರೆ ಕಂಬಳ ಕೂಟದ ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ನೇಗಿಲು ಕಿರಿಯ ವಿಭಾಗಗಲ್ಲಿ ಒಟ್ಟು 159 ಕೋಣಗಳ ಜೊತೆ ಸ್ಪರ್ಧಿಸಿದ್ದವು. ಕಂಬಳದಲ್ಲಿ ಗೆದ್ದ ಜೋಡಿಗೆ ಮೊದಲ ಬಹುಮಾನವಾಗಿ 16 ಗ್ರಾಂ ಚಿನ್ನದ ಪದಕ ಹಾಗೂ ಒಂದು ಲಕ್ಷ ನಗದು, ಎರಡನೇ ಸ್ಥಾನಕ್ಕೆ 8 ಗ್ರಾಂ ಚಿನ್ನದ ಪದಕ ಹಾಗೂ 50 ಸಾವಿರ ನಗದು, ಮೂರನೇ ಸ್ಥಾನಕ್ಕೆ 4 ಗ್ರಾಂ ಚಿನ್ನ ಮತ್ತು 25 ಸಾವಿರ ಹಣ ನೀಡಲಾಯಿತು. ವಿಭಾಗಾವಾರ ಫಲಿತಾಂಶ ಹೀಗಿದೆ.
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಸಿ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್
ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ "ಎ"
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ