ಕರ್ನಾಟಕ

karnataka

ETV Bharat / state

ಸರ್ಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಪ್ರಯತ್ನ: ಬೃಹತ್ ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘ - ಕರ್ನಾಟಕದಲ್ಲಿ ಹೊಸ ಕೊರೊನಾ ಮಾರ್ಗಸೂಚಿ

ಸರ್ಕಾರದ ಹೊಸ ಮಾರ್ಗಸೂಚಿ ಹಿನ್ನೆಲೆ ಬೃಹತ್ ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಪಿ ಸಿ ರಾವ್ ಪ್ರತಿಕ್ರಿಯೆ ನೀಡಿದ್ದು, ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಾವು ಮುಂದಿನ ದಿನಗಳಲ್ಲಿ ಆದಷ್ಟು ಮಟ್ಟಿಗೆ ಎಲ್ಲ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸಲು ಪ್ರಯತ್ನಿಸಿತ್ತೇವೆ ಎಂದು ತಿಳಿಸಿದ್ದಾರೆ.

bengaluru hotel association president reaction over corona guidelines
ಪಿ ಸಿ ರಾವ್ ಪ್ರತಿಕ್ರಿಯೆ

By

Published : Apr 3, 2021, 7:04 AM IST

ಬೆಂಗಳೂರು:ಎಲ್ಲರ ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಪ್ರಯತ್ನಿಸಿತ್ತೇವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದರು.

ಪಿ ಸಿ ರಾವ್ ಪ್ರತಿಕ್ರಿಯೆ

ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನುಹೊರಡಿಸಿದ್ದು, ಹೋಟೆಲ್​ಗಳಲ್ಲಿ 50 ಪ್ರತಿಶತ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ಬೆಂಗಳೂರು ನಗರದಲ್ಲಿ ಕೋವಿಡ್ ಸಾಕಷ್ಟು ಹರಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸೂಕ್ತ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಾಗಲೇ ಹೋಟೆಲ್​ಗಳಲ್ಲಿ 50 ಪ್ರತಿಶತ ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಕಡ್ಡಾಯವಾಗಿ ಮಾಸ್ಕ್​​, ಸ್ಯಾನಿಟೈಸೆಷನ್, ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಟ್ಟು ಸಾಮಾಜಿಕ ಅಂತರ ಪಾಲಿಸುತ್ತಿದ್ದೇವೆ ಎಂದು ತಿಳಿಸಿದರು.

50 ಪ್ರತಿಶತ ಸೀಟಿಂಗ್ ವ್ಯವಸ್ಥೆ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶ ಸ್ವಲ್ಪ ಕಷ್ಟಕರವಾದರೂ ಮುಖ್ಯವಾಗಿ ಗ್ರಾಹಕರು ಸಹಕರಿಸಬೇಕು, ಹೆಚ್ಚಿಗೆ ಮಟ್ಟದಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗುವುದು, ಹೋಟೆಲ್​ಗಳಲ್ಲಿ ಆದಷ್ಟು ಕಡಿಮೆ ಸಮಯ ಕುಳಿತುಕೊಳ್ಳುವ ಮೂಲಕ ಇತರ ಗ್ರಾಹಕರಿಗೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

ABOUT THE AUTHOR

...view details