ಬೆಂಗಳೂರು: ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಮೂರನೇ ಒಂದರಷ್ಟು ಅಂದರೆ ಶೇ.33 ರಷ್ಟು ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ ಆಗ ಕಾರಣ ನೀಡುವ ಅಗತ್ಯವಿಲ್ಲ. ಆದರೆ, ನಿಯಮದಂತೆ 15 ದಿನ ಮುಂಚಿತವಾಗಿಯೇ ನೋಟಿಸ್ ನೀಡಿದರೆ ಸಾಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಬೆಳಗಾವಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸೊಸೈಟಿಯ ಅಧ್ಯಕ್ಷ ನಾಸೀರುದ್ದೀನ್ ಭಗವಾನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ ಏನು ?: ಶ್ರೀ ಮಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆ ಸೊಸೈಟಿಯ ಅಧ್ಯಕ್ಷ ನಾಸೀರುದ್ದೀನ್ ಭಗವಾನ್ ವಿರುದ್ಧ 2023 ರ ಮಾರ್ಚ್‌ನಲ್ಲಿ 9 ಸದಸ್ಯರು ಅವಿಶ್ವಾಸ ಮಂಡನೆ ನಿರ್ಣಯ ನೋಟಿಸ್ ಕಳುಹಿಸಿದ್ದರು. ಅದನ್ನು ಅವರು ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಅಧಿಕಾರಿಯನ್ನು ನಿಯೋಜಿಸಲು 7 ದಿನಕ್ಕೂ ಅಧಿಕ ಕಾಲ ತೆಗೆದುಕೊಂಡಿದ್ದಾರೆ. ತಮಗೆ ನೋಟಿಸ್ ಪ್ರತಿಯನ್ನು ನೀಡಿಲ್ಲ ಹಾಗೂ ಕಾರಣವನ್ನೂ ಸಹ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ:ಸಮನ್ಸ್ ಜಾರಿ ಮಾಡದೆ ವಿಚ್ಛೇದನ ಮಂಜೂರು : ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು
ಈ ಅರ್ಜಿ ವಿಚಾರಣೆ ನಡೆಸಿದ ಎಂ.ಐ.ಅರುಣ್ ಅವರಿದ್ದ ನ್ಯಾಯ ಪೀಠವು, ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಶೇಕಡ 33 ರಷ್ಟು ಸದಸ್ಯರು ವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ ಆಗ ಕಾರಣ ನೀಡುವ ಅಗತ್ಯವಿಲ್ಲ. ಆದರೆ ನಿಯಮದಂತೆ 15 ದಿನ ಮುಂಚಿತವಾಗಿಯೇ ನೋಟಿಸ್ ನೀಡಿದರೆ ಸಾಕು ಎಂದು ತಿಳಿಸಿದೆ.