ಕರ್ನಾಟಕ

karnataka

ETV Bharat / state

ಹೊಸ ವರ್ಷಾಚರಣೆಗೆ ಸಿದ್ಧತೆ; ಬೆಂಗಳೂರಲ್ಲಿ 60 ಸಾವಿರ ಹೋಟೆಲ್​ ರೂಮ್ಸ್​​​ ಬುಕ್​ - ಬೃಹತ್‌ ಬೆಂಗಳೂರು

ಹೊಸ ವರ್ಷಾಚರಣೆ ವೇಳೆ ಡಿಲಕ್ಸ್, ಪ್ರಿಮಿಯಂ ವಿಶೇಷ ಪಾರ್ಟಿಗಳನ್ನು ಪಬ್‌, ರೆಸ್ಟೋರೆಂಟ್​ಗಳು ಏರ್ಪಡಿಸಿದ್ದು, ಆನ್‌ಲೈನ್‌ ಬುಕ್ಕಿಂಗ್‌ ಜೋರಾಗಿದೆ. ಮುಂಗಡ ಬುಕ್ಕಿಂಗ್​​​ಗೆ ಶೇ.30ರ ವರೆಗೆ ರಿಯಾಯಿತಿ ನೀಡುತ್ತಿವೆ.

Silicon City Bangalore
ಸಿಲಿಕಾನ್ ಸಿಟಿ ಬೆಂಗಳೂರು

By ETV Bharat Karnataka Team

Published : Dec 30, 2023, 8:36 PM IST

ಬೆಂಗಳೂರು: ಹೊಸ ವರ್ಷ ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜುಗೊಂಡಿದೆ. ಹೋಟೆಲ್ ಕೊಠಡಿಗಳು ಮುಂಗಡವಾಗಿ ಬುಕ್‌ ಆಗಿವೆ, ಪಬ್‌, ಪಾರ್ಟಿ ಲಾನ್‌, ಫಾರ್ಮ್‌ಹೌಸ್‌ನಲ್ಲಿ ತಯಾರಿ ಜೋರಾಗಿ ನೆಡೆಯುತ್ತಿದೆ.

ಎಂ.ಜಿ.ರೋಡ್‌, ಬ್ರೀಗೇಡ್‌ ರೋಡ್‌, ಚರ್ಚ್ ಸ್ಟ್ರೀಟ್ ಸೇರಿದಂತೆ ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಮತ್ತು ಇತರ ಟೆಕ್‌ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಪಬ್‌, ರೆಸ್ಟೋರೆಂಟ್‌ಗಳು ಡಿಸೆಂಬರ್ 31ರ ಮಧ್ಯರಾತ್ರಿಯ ಪಾರ್ಟಿ, ವಿಶೇಷ ಚಟುವಟಿಕೆಗೆ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಸೆಳೆಯುತ್ತಿವೆ.

ಪಾರ್ಟಿಯಲ್ಲಿ ಏನೇನು ಇರಲಿದೆ?: ಪೂಲ್‌ಸೈಡ್ ಪಾರ್ಟಿ, ರೈನ್ ಡ್ಯಾನ್ಸ್, ಫೈರ್‌ ಡ್ಯಾನ್ಸ್‌, ಸೆಲೆಬ್ರಿಟಿ ಡಿಜೆ, ಹಾಲಿವುಡ್‌, ಬಾಲಿವುಡ್‌, ಪಂಜಾಬಿ, ಲೋಕಲ್‌ ಮ್ಯೂಸಿಕ್, ಬೆಲ್ಲಿ ಡ್ಯಾನ್ಸ್‌ ವ್ಯವಸ್ಥೆ ಮಾಡಲಾಗಿದೆ. ಫುಡ್​​ಕೌಂಟರ್, ಅನಿಯಮಿತ ತಿನಿಸು, ಡ್ರಿಂಕ್ಸ್‌ಗಳನ್ನು ಪಾರ್ಟಿ ಆಯೋಜಕರು ಕಲ್ಪಿಸಲು ಮುಂದಾಗಿದ್ದಾರೆ.

ವಿಐಪಿ, ವಿವಿಐಪಿ ಕೌಂಟರ್‌, ಸೆಲೆಬ್ರಿಟಿ ಕೌಂಟರ್‌, ಫ್ಯಾಮಿಲಿ ಕೌಂಟರ್‌ ಎಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ ಮಹಿಳಾ ಹಾಗೂ ಪುರುಷ ಬೌನ್ಸ್‌ರ್‌ಗಳನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಪಾರ್ಟಿ ಬಳಿಕ ಸುರಕ್ಷಿತವಾಗಿ ಮನೆ ತಲುಪಿಸಲು ಕ್ಯಾಬ್‌, ಅಥವಾ ವಸತಿ ವ್ಯವಸ್ಥೆಯನ್ನು ಕೆಲ ಹೋಟೆಲ್​​​ಗಳು ಕಲ್ಪಿಸುತ್ತಿವೆ. ಬಹುತೇಕ ಕಡೆ 5ವರ್ಷದೊಳಗಿನ ಮಕ್ಕಳಿಗೆ ಪಾರ್ಟಿ ಪ್ರವೇಶ ನಿರಾಕರಿಸಲಾಗಿದೆ.

ಮುಂಗಡ ಬುಕ್ಕಿಂಗ್​​​ಗೆ ಶೇ.30 ಘೋಷಣೆ:ಡಿಲಕ್ಸ್, ಪ್ರಿಮಿಯಂ ಪಾರ್ಟಿ ಪ್ಯಾಕೇಜ್‌ಗಳನ್ನು ಪಬ್‌ಗಳು, ಹೋಟೆಲ್ ಗಳು ಮಾಡಿಕೊಂಡಿವೆ. ಆನ್‌ಲೈನ್‌ ಬುಕ್ಕಿಂಗ್‌ ಜೋರಾಗಿದೆ. ಒಬ್ಬರಿಗೆ 2 ಸಾವಿರ ರೂಪಾಯಿ ಯಿಂದ 5 ಸಾವಿರ, ಕಪಲ್‌ ಗಳಿಗೆ 3 ಸಾವಿರದಿಂದ 8 ಸಾವಿರದವರೆಗೆ ದರ ನಿಗದಿ ಮಾಡಲಾಗಿದೆ. ಮುಂಗಡ ಬುಕ್ಕಿಂಗ್​​​ಗೆ ಶೇ.30ರ ವರೆಗೆ ರಿಯಾಯಿತಿ ನೀಡುತ್ತಿವೆ.

800 ಕೋಟಿ ವಹಿವಾಟು ನಿರೀಕ್ಷೆ: ಹೊಸ ವರ್ಷಾಚರಣೆಗೆ ಈ ಬಾರಿ ನಗರದ ಹೋಟೆಲ್, ಪಬ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಸೇರಿ ಸುಮಾರು 800 ಕೋಟಿ ರೂಪಾಯಿ ವಹಿವಾಟು ನಡೆಯುವ ಬಗ್ಗೆ ನಿರೀಕ್ಷೆ ಇದೆ. ಇದರಲ್ಲಿ 300 ಕೋಟಿ ರೂಪಾಯಿ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಸಲ್ಲಿಕೆಯಾಗಲಿದೆ. ಕೋವಿಡ್ ಕರಿಛಾಯೆಯ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೋಟೆಲ್ ಉದ್ಯಮಕ್ಕೆ ಉತ್ತಮ ಆದಾಯ ಹರಿದುಬರುವ ನಿರೀಕ್ಷೆಯಿದೆ ಎಂದು ಬೃಹತ್‌ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್‌ ತಿಳಿಸಿದ್ದಾರೆ.

60 ಸಾವಿರ ಹೋಟೆಲ್ ಕೊಠಡಿ ಬುಕ್‌: ನಗರದಲ್ಲಿನ ಸುಮಾರು 60 ಸಾವಿರ ಹೋಟೆಲ್ ಕೊಠಡಿಗಳು ಬುಕ್‌ ಆಗಿವೆ. ಆನ್‌ಲೈನ್‌ ಬುಕ್ಕಿಂಗ್‌ ಸಾಕಷ್ಟು ಅಗಿದೆ. ಪಾರ್ಟಿಗಳು, ರೂಮ್ ಗಳು, ಊಟದ ಟೇಬಲ್ ಗಳು ಸೇರಿ ಉತ್ತಮ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ಹೊಸ ವರ್ಷಾಚರಣೆಗೆ ಬೆಂಗಳೂರಿಗರ ನೆಚ್ಚಿನ ಹಾಟ್​​ಸ್ಪಾಟ್​ಗಳಿವು

ABOUT THE AUTHOR

...view details