ಬೆಂಗಳೂರು:ಹಣದ ವಹಿವಾಟಿಗೆ ಕ್ಯೂಆರ್ ಸ್ಕ್ಯಾನ್ಗಳು ಎಷ್ಟು ಸರಳವೋ ಅಷ್ಟೇ ಮಾರಕ. ಬ್ಯಾಂಕ್ನಿಂದ ಹಣ ಪಡೆಯಲು ವ್ಯಕ್ತಿಯೊಬ್ಬ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮೋಸ ಹೋದರೆ, ಇನ್ನೊಂದೆಡೆ ರೆಸ್ಟೋರೆಂಟ್‌ನಲ್ಲಿ ಇಡಲಾಗಿದ್ದ ಕ್ಯೂಆರ್ ಕೋಡ್ ಅನ್ನೇ ಬದಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿದ ವಂಚನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಿಶಾಲ್ ಅವರು ಬ್ಯಾಂಕ್ ನಿಂದ ಮೇಲ್ ಬಂದಿದೆ ಎಂದು ತಿಳಿದು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಕಳೆದು ಕೊಂಡಿರುವ ಘಟನೆ ಜರುಗಿದೆ. ವಿಶಾಲ್ ಮೇಲ್ ಬ್ಯಾಂಕಿನಿಂದ ಬಂದಿದೆ ಎಂದು ಭಾವಿಸಿ ತನ್ನ ಫೋನ್‌ನಲ್ಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ. ನಂತರ ಆತನ ಫೋನ್ ನಲ್ಲಿದ್ದ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳು ಮಾತ್ರವಲ್ಲದೇ ಬ್ಯಾಂಕ್ ಖಾತೆಯ ಪಿನ್‌ಗಳನ್ನು ಫೋನ್‌ನಲ್ಲಿ ಸೈಬರ್ ಕ್ರಿಮಿನಲ್ ಗಳು ಸಂಗ್ರಹಿಸಲಾಗಿದೆ. ಸ್ವಲ್ಪ ಸಮಯದೊಳಗೆ ಖಾತೆಯಲ್ಲಿನ ಹಣ ಕೂಡ ಖಾಲಿಯಾಗಿದೆ. ವೈಯಕ್ತಿಕ ಫೋಟೋಗಳನ್ನು ತಿರುಚಿ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಇನ್ನೊಂದೆಡೆ ದುಬಾರಿ ರೆಸ್ಟೊರೆಂಟ್ ನಲ್ಲಿ ಕ್ಯೂಆರ್ ಕೋಡ್ ಬದಲಾಯಿಸಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಘಟನೆ ನಡೆದಿದೆ. ಒಂದು ದಿನ ಇದ್ದಕ್ಕಿದ್ದಂತೆ ಆದಾಯ ಕಡಿಮೆಯಾದ ಹಿನ್ನೆಲೆ ವಿಚಾರಿಸಿದ ಮಾಲೀಕರಿಗೆ ಆಘಾತಕಾರಿ ಸತ್ಯ ಒಂದು ತಿಳಿದಿದೆ. ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ತಮ್ಮ ಬಿಲ್‌ಗಳನ್ನು ಪಾವತಿಸಲು ಡೈನಿಂಗ್ ಟೇಬಲ್‌ನ ಪಕ್ಕದಲ್ಲಿ ಕ್ಯೂಆರ್ ಕೋಡ್ ಅನ್ನು ಇಡಲಾಗಿತ್ತು.
ಸೈಬರ್ ಅಪರಾಧಿಗಳು ಈ ಕ್ಯೂಆರ್ ಕೋಡ್ ಬದಲಾಯಿಸಿ ತಮ್ಮಕ್ಯೂಆರ್ ಕೋಡ್ ಅನ್ನು ಅಂಟಿಸಿದ್ದಾರೆ. ಇದರಿಂದ ಗ್ರಾಹಕರು ಪಾವತಿಸಿದ ಬಿಲ್‌ಗಳು ಅವರ ಖಾತೆಗಳಿಗೆ ಜಮಾ ಆಗುತ್ತಿರುವುದು ಬೆಳೆಕಿಗೆ ಬಂದಿದೆ. ಅಪರಾಧಿಗಳು ದೆಹಲಿಯ ಕೆಲವು ಪಾರ್ಕಿಂಗ್ ಸ್ಥಳಗಳ ಕ್ಯೂಆರ್ ಕೋಡ್ ಅನ್ನು ಸಹ ಬದಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಅದು ಹೇಗೆ ಸಂಭವಿಸುತ್ತದೆ?:ದೇಶದಲ್ಲಿ ನೋಟು ಅಮಾನ್ಯೀಕರಣ ಮತ್ತು ಕೋವಿಡ್ ಯಿಂದಾಗಿ ಆನ್‌ಲೈನ್ ಮತ್ತು ಕ್ಯೂಆರ್ ಕೋಡ್ ಪಾವತಿಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಇದನ್ನೆ ಗಮನದಲ್ಲಿ ಇಟ್ಟುಕೊಂಡು ಸೈಬರ್ ಅಪರಾಧಿಗಳು ಹಣವನ್ನು ದೋಚುತ್ತಿದ್ದಾರೆ. ಮೊದಲನೆಯದಾಗಿ ಜನರ ಫೋನ್‌ಗಳನ್ನು ಹ್ಯಾಕ್ ಮಾಡಿ ಅದರಲ್ಲಿ ಗ್ರಾಹಕರ ವಿವರಗಳನ್ನು ತಿಳಿಯಲು ಬ್ಯಾಂಕ್ ಹೆಸರಿನೊಂದಿಗೆ ಕ್ಯೂಆರ್ ಕೋಡ್ ಕಳುಹಿಸಲಾಗುತ್ತದೆ. ಜನರ ದೌರ್ಬಲ್ಯಗಳನ್ನು ಅರಿತು ಲಾಭ ಪಡೆಯುವ ಮಾರ್ಗದವ ದೃಶ್ಯಗಳನ್ನು ವೀಕ್ಷಿಸಲು ಸಂದೇಶಗಳನ್ನು ಕಳುಹಿಸಿ ವಂಚನೆ ಮಾಡುತ್ತಿದ್ದಾರೆ