ಬೆಂಗಳೂರು: ಮಗುವಿಗೆ ಕಿವಿ ಚುಚ್ಚಿಸುವ ವಿಚಾರವಾಗಿ ಸಿಂಚನಾ ಹಾಗೂ ಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆ ಅವರು ತವರು ಮನೆ ಸೇರಿದ್ದರು ಎಂದು ಕುಟುಂಬದ ಹಿರಿಯ, ಸಿಂಚನಾ ತಂದೆ ಹಲ್ಲೆಗೆರೆ ಶಂಕರ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
9 ತಿಂಗಳ ಮಗುವನ್ನು ಕೊಲೆ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. 4 ದಿನಗಳ ಕಾಲ ಮೃತದೇಹಗಳ ಮಧ್ಯೆಯಿದ್ದ ಎರಡೂವರೆ ವರ್ಷದ ಮಗು ಪವಾಡದ ರೀತಿಯಲ್ಲಿ ಬದುಕುಳಿದಿದ್ದಾಳೆ.
ಈ ಸಂಬಂಧ ಕುಟುಂಬದ ಹಿರಿಯ ಶಂಕರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. 31 ವರ್ಷದಿಂದ ಕುಟುಂಬಕ್ಕಾಗಿ ಶ್ರಮಪಟ್ಟಿದ್ದೇನೆ. ಮಕ್ಕಳಿಗೆ ವಿದ್ಯಾಭ್ಯಾಸ ಪಾಲನೆ, ಪೋಷಣೆ ಮಾಡಿದ್ದೇನೆ. ಹಿರಿಯ ಮಗಳು ಇಂಜಿನಿಯರಿಂಗ್, ಕಿರಿಯ ಮಗಳು ಬಿಕಾಂ ವ್ಯಾಸಂಗ ಮಾಡಿದ್ದು ಇಬ್ಬರಿಗೂ ಮದುವೆ ಮಾಡಿದ್ದೆ. ಮಗನಿಗೆ ಸಹ ಎಲ್ಲವನ್ನೂ ಕೊಟ್ಟಿದ್ದೇನೆ. ಪತ್ನಿ ಭಾರತಿ ಸಹ ನನ್ನೊಂದಿಗೆ ಕಷ್ಟಪಟ್ಟಿದ್ದಾಳೆ ಎಂದು ಶಂಕರ್ ಅಳಲು ತೋಡಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.