ಕರ್ನಾಟಕ

karnataka

ETV Bharat / state

ದೇವನಹಳ್ಳಿಯಲ್ಲಿ ಮರ್ಯಾದಾ ಹತ್ಯೆ: ಕೋಳಿ ಕಟ್​ ಮಾಡುವ ಚಾಕುವಿನಿಂದ ಮಗಳ ಕತ್ತು ಕೊಯ್ದು ಕೊಲೆ! - ಹೆಣ್ಣು ಮಕ್ಕಳು ಪ್ರೀತಿ ಬಲೆಗೆ ಬಿದ್ದಿದ್ದಾರೆ

ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಗಳು ಪ್ರೀತಿಸುತ್ತಿರುವ ವಿಷಯ ತಿಳಿದು ಅಕ್ರೋಶಗೊಂಡ ತಂದೆ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

father who brutally murdered his daughter  brutally murdered his daughter over lover matter  Bengaluru crime news  ಮಗಳ ಪ್ರೀತಿಗೆ ತಂದೆಯ ವಿರೋಧ  ಮಗಳ ಕತ್ತು ಕೊಯ್ದು ಕೊಲೆ ಮಾಡಿದ ಅಪ್ಪ  ಬೆಂಗಳೂರಿನಲ್ಲಿ ಮರ್ಯಾದಾ ಹತ್ಯೆ ಪ್ರಕರಣ  ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ  ತಂದೆಯೇ ಮಗಳನ್ನ ಭರ್ಭರವಾಗಿ ಹತ್ಯೆ  ಭೀಕರವಾಗಿ ಮಗಳ ಕೊಲೆ  ಹೆಣ್ಣು ಮಕ್ಕಳು ಪ್ರೀತಿ ಬಲೆಗೆ ಬಿದ್ದಿದ್ದಾರೆ
ಮಗಳ ಕತ್ತು ಕೊಯ್ದು ಕೊಲೆ ಮಾಡಿದ ಅಪ್ಪ

By ETV Bharat Karnataka Team

Published : Oct 12, 2023, 10:16 AM IST

Updated : Oct 12, 2023, 12:55 PM IST

ಬೆಂಗಳೂರು : ಮರ್ಯಾದೆಗೆ ಹೆದರಿ ತಂದೆಯೇ ಮಗಳನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕವನ (20) ಮೃತ ಯುವತಿ ಎಂದು ಗುರುತಿಸಲಾಗಿದೆ. ತಂದೆ ಮಂಜುನಾಥ್ ಎಂಬುವರು ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ.

ರಾತ್ರಿ ಮಲಗಿದ್ದ ವೇಳೆ‌ ಮಗಳ‌ ಕತ್ತು ಕೊಯ್ದು, ಕಟ್ಟಿಗೆಯಿಂದ ತಲೆಗೆ ಹೊಡೆದು ಭೀಕರವಾಗಿ ಮಗಳ ಕೊಲೆ ಮಾಡಿದ್ದಾನೆ. ಮಗಳು ಅನ್ಯ ಜಾತಿ ಯುವಕನನ್ನ ಪ್ರೀತಿ ಮಾಡುತ್ತಿದ್ದಾಳೆ ಅಂತ ಮರ್ಯಾದೆಗೆ ಹೆದರಿ ಈ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಮಗಳ ಕೊಲೆ ಮಾಡಿ ನಂತರ ಪೊಲೀಸ್ ಠಾಣೆಗೆ ಬಂದ ತಂದೆ ಮಂಜುನಾಥ್ ಶರಣಾಗಿದ್ದಾನೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಮಂಜುನಾಥ್ ಅವರ ಇಬ್ಬರು ಪುತ್ರಿಯರು ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಮಂಗಳವಾರವಷ್ಟೇ ಇವರ ಕಿರಿಯ ಮಗಳ ಪ್ರೀತಿಯ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಠಾಣೆಯಲ್ಲಿ ಪ್ರೀತಿಸಿದವನ ಜೊತೆ ಹೋಗೋದಾಗಿ ಕಿರಿ ಮಗಳು ಹೇಳಿದ್ದಳು. ಹೀಗಾಗಿ ಪೊಲೀಸರು ಮಂಜುನಾಥ್​ ಅವರ ಕಿರಿ ಮಗಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು.

ಇದರ ಬೆನ್ನಲ್ಲೇ ಹಿರಿ‌ ಮಗಳು ಸಹ ಪ್ರೀತಿ ಬಲೆಗೆ ಬಿದ್ದಿರುವ ವಿಚಾರ ತಂದೆಗೆ ತಿಳಿದಿದೆ. ಹೀಗಾಗಿ ಇಬ್ಬರ ನಡುವೆ ನಿನ್ನೆ ರಾತ್ರಿ ಜಗಳವಾಗಿದೆಯಂತೆ. ಆ ಬಳಿಕ ರಾತ್ರಿ ಹೊತ್ತು ಮಲಗಿದ್ದ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇನ್ನು ಮಂಜುನಾಥ್​ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ತಂದೆ ಕೋಳಿ ಕೊಯ್ಯುವ ಚಾಕುವಿನಿಂದಲೇ ಮಗಳ ಕತ್ತು ಕೊಯ್ದು ಭೀಕರ ಕೊಲೆ ಮಾಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಮಂಜುನಾಥ್​ ಅವರು ಯಾರೊಂದಿಗೂ ಜಗಳವಾಡಿದ ವ್ಯಕ್ತಿ ಅಲ್ಲ. ಬಹಳ ಸಂಭಾವಿತರಾಗಿದ್ದರು. ಆದರೆ ಇಬ್ಬರು ಮಕ್ಕಳ ಪ್ರೇಮದ ವಿಚಾರವಾಗಿ ಅವರು ಬಹಳ ನೊಂದಿದ್ದರು ಎನ್ನಲಾಗಿದೆ. ಇತ್ತಿಚೇಗಷ್ಟೇ ಕವನ ಬಾಯ್​ಫ್ರೆಂಡ್​ಗೆ ಬುದ್ಧಿ ಹೇಳಿ ಕಳುಹಿಸಲಾಗಿತ್ತು. ಅಷ್ಟರಲ್ಲೇ ಈ ಘಟನೆ ನಡೆದಿದೆ ಎಂದು ಮೃತ ಸಂಬಂಧಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸದ್ಯ ಈ ಘಟನೆ ಕುರಿತು ವಿಶ್ವನಾಥಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ಮಂಜುನಾಥ್​ ಸಂಬಂಧಿಕರಿಗೆ ಹಸ್ತಾಂತರಿಸಲಿದ್ದಾರೆ. ಸದ್ಯ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿರುವ ಆರೋಪಿ ಮಂಜನಾಥ್​ ವಿಚಾರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಇನ್ನು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಓದಿ:ಬೆಂಗಳೂರು: ನಡುರಸ್ತೆಯಲ್ಲಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.. ಕೊಲೆ

Last Updated : Oct 12, 2023, 12:55 PM IST

ABOUT THE AUTHOR

...view details