ಕರ್ನಾಟಕ

karnataka

ಡ್ರಗ್ಸ್ ಮಾಫಿಯಾ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

By

Published : Feb 23, 2021, 11:07 AM IST

ಡ್ರಗ್ಸ್ ಮಾಫಿಯಾ ನಿರ್ಮೂಲನಾ ಪಣ ತೊಟ್ಟಿರುವ ಸಿಸಿಬಿ ಪೊಲೀಸರು ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

police arrested two Nigerian people
ಬಂಧಿತರು

ಬೆಂಗಳೂರು:ನಗರದ ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

ಚುಕು ಎಮೇಕಾ, ಅಮ್ಸೆಲಮ್ ಚಿಗೋಜ್ಹೆ ಬಂಧಿತ ಆರೋಪಿಗಳು. ಡ್ರಗ್ಸ್ ಜಾಲ ಸಂಪೂರ್ಣ ನಿರ್ಮೂಲನೆ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಪಣ ತೊಟ್ಟಿದ್ದಾರೆ. ಈ ಸಂಬಂಧ ಹಲವು ಪ್ರತಿಷ್ಠಿತರು ಭಾಗಿಯಾಗಿರುವ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ ಹಾಗೂ ಇನ್ನು ಹಲವು ಪ್ರಕರಣಗಳ ಮೂಲ ಹುಡುಕಲು ಕೇಂದ್ರ ತನಿಖಾ ತಂಡ ಮುಂದಾಗಿದೆ.

56 ಎಕ್ಸ್‌ಟೆಸಿ ಮಾತ್ರೆಗಳು ವಶಕ್ಕೆ...

ಸದ್ಯ ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತರಿಂದ 56 ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಆರೋಪಿಗಳಿಂದ ಇನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಓದಿ:ಸಿಲಿಕಾನ್​ ಸಿಟಿಯಲ್ಲಿ ಡ್ರಗ್ಸ್​ ಮಾರಾಟ: ಎಂಟು ಜನರನ್ನು ಬಂಧಿಸಿದ ಸಿಸಿಬಿ

ABOUT THE AUTHOR

...view details