ಬೆಂಗಳೂರು: ಗೋವಿಂದಪುರ ಡ್ರಗ್ಸ್ ದಂಧೆ ಬಯಲು ಪ್ರಕರಣದಲ್ಲಿ ಬಂಧಿತಳಾಗಿರುವ ಮಾಡೆಲ್ ಸೋನಿಯಾ ಅಗರ್ವಾಲ್ ಡ್ರಗ್ ಡೀಲ್ ಕಂಡು ಪೊಲೀಸರೇ ದಂಗಾಗಿದ್ದಾರೆ.
ಖಾಕಿಗೇ ಪ್ರಶ್ನೆ ಮಾಡಿದ ಆರೋಪಿ
ಈಸ್ ಇಟ್ ಅಫೆನ್ಸ್ ಇನ್ ಇಂಡಿಯಾ? ಎಂದು ಪೊಲೀಸರನ್ನೇ ಸೋನಿಯಾ ಕೇಳಿದ್ದಾಳೆ. ಸೋನಿಯಾ, ವಿದೇಶದಲ್ಲಿದ್ದ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದಳಂತೆ. ನಂತರ 2016 ರಲ್ಲಿ ಬೆಂಗಳೂರಿಗೆ ಬಂದ ಮೇಲೆ ಆರು ತಿಂಗಳು ಗಾಂಜಾ ಸೇವನೆ ಬಿಟ್ಟಿದ್ದಳಂತೆ. ಬಳಿಕ ಗೋರಿಪಾಳ್ಯದಲ್ಲಿ ಮಹಿಳೆಯೊಬ್ಬರಿಂದ ತಾನೇ ಗಾಂಜಾ ಖರೀದಿ ಮಾಡಿದ್ದಳಂತೆ.
ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಸೋನಿಯಾ
ಪ್ರತಿ ವೀಕೆಂಡ್ನಲ್ಲಿಯೂ ನೈಜೀರಿಯಾ ಡ್ರಗ್ ಪೆಡ್ಲರ್ ಥಾಮಸ್ಗೆ ಚಾಟ್ ಮಾಡಿ 5 ರಿಂದ 10 ಗ್ರಾಂ ಕೊಕೇನ್ ತರಿಸಿಕೊಳ್ಳುತ್ತಿದ್ದಳಂತೆ. ಜತೆಗೆ ಐಷಾರಾಮಿ ಹೋಟೆಲ್ಗಳಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದಾಳೆ. ಸೇವನೆ ಜತೆಗೆ ಡ್ರಗ್ಸ್ ವ್ಯವಹಾರ ನಡೆಸಿರುವ ಶಂಕೆಯಿದೆ. ಬೇರೆಯವರೊಂದಿಗೆ ಕೊಕೇನ್ ವ್ಯವಹಾರ ಮಾಡಿರುವ ಸಾಧ್ಯತೆಯಿದೆ.
ಡನ್ ಜೊ ಮೂಲಕ ಗಾಂಜಾ ಡೆಲಿವರಿ
ಆರೋಪಿ ದಿಲೀಪ್, ಸೋನಿಯಾಗೆ ಬೇಕಾದ ಗಾಂಜಾವನ್ನು ಡನ್ ಜೊ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದ. ಜೂನ್ ತಿಂಗಳಲ್ಲಿ ಥಾಮಸ್ ಜೊತೆ ಕೊಕೇನ್ಗಾಗಿ ಆರೋಪಿ ಚಾಟ್ ಮಾಡಿದ್ದಾಳೆ.
ಸ್ಟಾರ್ಗಳ ಲಿಂಕ್ ಕೂಡ ಪತ್ತೆ
ಈ ಹಿಂದೆ ಡ್ರಗ್ ಕೇಸ್ ಆರೋಪಿಯಾಗಿದ್ದ ಕಾರ್ತಿಕ್ ರಾಜುನಿಂದ ಈ ಚಟಕ್ಕೆ ಬಿದ್ದಿರುವುದಾಗಿ ಹೇಳಿಕೆ ನೀಡಿದ್ದಾಳೆ. ಸದ್ಯ ಕಾರ್ತಿಕ್ ರಾಜುಗೂ ನೋಟಿಸ್ ನೀಡಲು ಗೋವಿಂದಪುರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಡ್ರಗ್ ಕೇಸ್ನಲ್ಲಿ ಕಾರ್ತಿಕ್ ರಾಜು ವಿಚಾರಣೆ ಎದುರಿಸಿ ಬೇಲ್ ಪಡೆದಿದ್ದ.