ಕರ್ನಾಟಕ

karnataka

ETV Bharat / state

Bengaluru crime: ಬಾಡಿಗೆ ಮನೆ ಹುಡುಕುವ ನೆಪದಲ್ಲಿ ವಿಕೃತಿ.. ಮಹಿಳೆಯರ ಉಡುಪು ತಡಕಾಡುವ ವ್ಯಕ್ತಿಯಿಂದ ಆತಂಕ! - ಮನೆ ಮನೆಗೂ ಹೋಗಿ ಮಹಿಳೆಯರ ಉಡುಪು

ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಮಹಿಳೆಯರ ಉಡುಪು ಹುಡುಕುತ್ತಿರುವುದು ಬೆಳಕಿಗೆ ಬಂದಿದೆ.

person searching for women clothes  Anxiety by a person searching for women clothes  Bengaluru crime  ಬಾಡಿಗೆ ಮನೆ ಹುಡುಕುವ ನೆಪದಲ್ಲಿ ವಿಕೃತಿ  ಮಹಿಳೆಯರ ಉಡುಪುಗಳ ತಡಕಾಡುವ ವ್ಯಕ್ತಿ  ಹಿಳೆಯರ ಉಡುಪುಗಳ ಹುಡುಕುತ್ತಿರುವುದು ಬೆಳಕಿಗೆ  ಮನೆ ಮನೆಗೂ ಹೋಗಿ ಮಹಿಳೆಯರ ಉಡುಪು  ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ವಿಧಾನಸೌಧ ಲೇಔಟ್
ಬಾಡಿಗೆ ಮನೆ ಹುಡುಕುವ ನೆಪದಲ್ಲಿ ವಿಕೃತಿ

By

Published : Jun 15, 2023, 2:04 PM IST

ಬೆಂಗಳೂರು: ಮನೆ ಮನೆಗೂ ಹೋಗಿ ಮಹಿಳೆಯರ ಉಡುಪುಗಳ ತಡಕಾಡುವ ವಿಕೃತ ಕಾಮುಕನೊಬ್ಬ ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ವಿಧಾನಸೌಧ ಲೇಔಟ್​ನಲ್ಲಿ ಕಂಡುಬಂದಿದ್ದು, ಏರಿಯಾದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಘಟನೆ ಕುರಿತು ಪ್ರಕರಣ ಸಹ ದಾಖಲಾಗಿದೆ.

ಸಂಜೆಯಾದರೆ ಸಾಕು ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಆರೋಪಿಯೊಬ್ಬ ನಗರದಲ್ಲಿ ಸಂಚರಿಸುತ್ತಿದ್ದನು. ಆ ಆರೋಪಿ ಸಾಮಾನ್ಯವಾಗಿ ಜನ ಕಡಿಮೆ ಇರುವ ಮತ್ತು ಒಂಟಿ ಮಹಿಳೆಯರು ಇರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದನು ಎಂದು ದೂರಿನಲ್ಲಿ ಸ್ಥಳೀಯರು ಆರೋಪಿಸಿದ್ದಾರೆ.

ಬಾಡಿಗೆ ಕೇಳುವ ನೆಪದಲ್ಲಿ ಸ್ನಾನದ ಮನೆ ಬಳಿ ಹೋಗಿ ಮೊಬೈಲ್​ನಲ್ಲಿ ಚಿತ್ರೀಕರಣ ಮಾಡುವುದು, ಒಂಟಿಯಾಗಿ ಓಡಾಡುವ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿರುವುದು ಕಂಡುಬಂದಿತ್ತು. ವಿಚಾರಿಸಲು ಹೋದರೆ ಆರೋಪಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಯ ಹೊರಗೆ ಒಣಹಾಕಿರುವ ಮಹಿಳೆಯರ ಉಡುಪು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿರುವುದು ಸಹ ನಮ್ಮ ಗಮನಕ್ಕೆ ಬಂದಿದೆ. ಆರೋಪಿಯಿಂದಾಗಿ ಒಂಟಿ ಮಹಿಳೆಯರಿಗೆ ಭಯ ಶುರುವಾಗಿದೆ ಎಂದು ಸ್ಥಳೀಯರು ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಓದಿ:ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದೊಯ್ದ ವಿಕೃತಕಾಮಿಗಳು.. ಎಂಥ ಕರ್ಮ ಮಾರ್ರೆ!

ಮಹಿಳೆಯರ ಒಳ ಉಡುಪು ಧರಿಸುತ್ತಿದ್ದ ವ್ಯಕ್ತಿ: ಬ್ಯಾಂಕ್ ಮ್ಯಾನೇಜರ್​​ವೊಬ್ಬರ ಮೃತದೇಹವು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಂಜಾಬ್‌ನ ಲುಧಿಯಾನ ನಗರದಲ್ಲಿ ಜೂನ್​ 9ರಂದು ಅಂದ್ರೆ, ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಮಹಿಳೆಯರ ಒಳ ಉಡುಪು ಧರಿಸಿರುವುದು ಪತ್ತೆಯಾಗಿತ್ತು. ಅಲ್ಲದೇ, ಆತನ ಕೋಣೆಯಲ್ಲಿ ಮಹಿಳೆಯರ ಉಡುಪುಗಳು ಸಹ ಪೊಲೀಸರಿಗೆ ಸಿಕ್ಕಿದ್ದವು.

ವಿನೋದ್ ಕುಮಾರ್ ಎಂಬವರೇ ಸಾವಿಗೆ ಶರಣಾದ ಮ್ಯಾನೇಜರ್. ಸಾರ್ವಜನಿಕ ವಲಯದ ಬ್ಯಾಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೂಲತಃ ಫಿರೋಜ್‌ಪುರ ನಿವಾಸಿಯಾದ ಇವರು ಲೂಧಿಯಾನದ ಅಮರಪುರ ಬಡಾವಣೆಯ ಮೊದಲ ಮಹಡಿಯ ಮನೆಯಲ್ಲಿ ಬಾಡಿಗೆ ಮಾಡಿಕೊಂಡು ಒಬ್ಬರೇ ವಾಸವಾಗಿದ್ದರು. ಈಗಾಗಲೇ ಮದುವೆ ಕೂಡ ಆಗಿದ್ದು, ಪತ್ನಿ ಮತ್ತು ಮೂವರು ಮಕ್ಕಳು ಫಿರೋಜ್‌ಪುರದಲ್ಲೇ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ ಮನೆಗೆ ಮರಳಿದ್ದ ವ್ಯಕ್ತಿ ಬೆಳಗ್ಗೆ ಶವವಾಗಿ ಪತ್ತೆ: ಇತ್ತೀಚೆಗೆ ವಿನೋದ್​ ಕುಮಾರ್ ತನ್ನ ಕುಟುಂಬವನ್ನು ಭೇಟಿ ಮಾಡಲು ಫಿರೋಜ್‌ಪುರಕ್ಕೆ ಹೋಗಿದ್ದರು. ಗುರುವಾರ ರಾತ್ರಿ ಲೂಧಿಯಾನದ ಮನೆಗೆ ಮರಳಿದ್ದರು. ಶುಕ್ರವಾರ ಬೆಳಗ್ಗೆ ಮನೆಯ ಕೆಲಸದವರು ಮನೆಯ ಬಾಗಿಲು ತಟ್ಟಿದ್ದಾರೆ. ಆದರೆ, ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮನೆಯ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಮನೆಯ ಮಾಲೀಕರು ಬಂದಾಗಲೂ ಯಾವುದೇ ಉತ್ತರ ಬಂದಿಲ್ಲ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ನಂತರ ಪೊಲೀಸರು ಸ್ಥಳ್ಕಕಾಗಮಿಸಿ ಬಾಗಿಲು ಮುರಿದು ಮನೆಯೊಳಗೆ ಹೋಗಿದ್ದಾರೆ. ಆಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಜೊತೆಗೆ, ಮೃತ ವಿನೋದ್​ ಕುಮಾರ್ ಮಹಿಳೆಯರ ಉಡುಪು ಧರಿಸಿರುವುದು ಕೂಡ ಬೆಳಕಿಗೆ ಬಂದಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡು ಬಗ್ಗೆ ಅನುಮಾನ ಇದೆ. ಇದರೊಂದಿಗೆ ಇದು ಅಪರೂಪದ ಪ್ರಕರಣವೂ ಆಗಿದೆ ಎಂದು ಪೊಲೀಸ್​ ಅಧಿಕಾರಿ ಆತ್ಮರಾಮ್ ತಿಳಿಸಿದ್ದರು.

ABOUT THE AUTHOR

...view details