ಕರ್ನಾಟಕ

karnataka

By

Published : Jun 1, 2021, 10:04 AM IST

ETV Bharat / state

Bengaluru Covid Update: ಹೊಸದಾಗಿ 3,442 ಕೊರೊನಾ ಪ್ರಕರಣಗಳು ವರದಿ

ರಾಜಧಾನಿ ಬೆಂಗಳೂರಿನಲ್ಲಿ ಲಾಕ್​ ಡೌನ್​ ಫಲ ಕೊಟ್ಟಿದ್ದು, ದಿನೇ ದಿನೇ ಹೊಸ ಪ್ರಕರಣಗಳು ಇಳಿಕೆಯಾಗುತ್ತಿದೆ. ನಿನ್ನೆ 4 ಸಾವಿರದಷ್ಟಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಂದು 3 ಸಾವಿರಕ್ಕೆ ಇಳಿಕೆಯಾಗಿದೆ.

Bengaluru Covid Update
ಬೆಂಗಳೂರು ಕೋವಿಡ್

ಬೆಂಗಳೂರು :ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 3,442 ಪ್ರಕರಣಗಳು ವರದಿಯಾಗಿದೆ.

ವಲಯವಾರು ಕೋವಿಡ್ ಪ್ರಕರಣಗಳು

ಎಲ್ಲೆಲ್ಲಿ ಎಷ್ಟೆಷ್ಟು?

ಬೊಮ್ಮನಹಳ್ಳಿ 369, ದಾಸರಹಳ್ಳಿ 88, ಬೆಂಗಳೂರು ಪೂರ್ವ 420, ಮಹಾದೇವಪುರ 571 , ಆರ್‌.ಆರ್ ನಗರ 244, ಬೆಂಗಳೂರು ದಕ್ಷಿಣ 276, ಬೆಂಗಳೂರು ಪಶ್ಚಿಮ 247, ಯಲಹಂಕದಲ್ಲಿ 227 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ನಿನ್ನೆ ನಗರದಲ್ಲಿ 3,992 ಪ್ರಕರಣಗಳು ಪತ್ತೆಯಾಗಿತ್ತು. 242 ಮಂದಿ ಮೃತಪಟ್ಟಿದ್ದರು. ಸದ್ಯ, ನಗರದಲ್ಲಿ 1,46,043 ಸಕ್ರಿಯ ಪ್ರಕರಣಗಳಿವೆ. ಮೇ 30 ರಂದು 44,197 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 26.34 ರಷ್ಟು ಇದ್ದು, ಮರಣ ಪ್ರಮಾಣ ಶೇ. 1.76 ರಷ್ಟುಇದೆ.

ಓದಿ : ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಿಸಿಎಂ ಕಾರಜೋಳ

ABOUT THE AUTHOR

...view details